ಪೂಜ್ಯರು ಜನಿಸಿದ ನಾಡಿನ ಮಣ್ಣನಿಂದ ಮಾಡಿದ ರಸಗುಲ್ಲಾವನ್ನು ಪ್ರಸಾದದಂತೆ ಸ್ವೀಕರಿಸುತ್ತೇನೆ-ಪ್ರಧಾನಿ ಮೋದಿ

Webdunia
ಮಂಗಳವಾರ, 30 ಏಪ್ರಿಲ್ 2019 (10:32 IST)
ನವದೆಹಲಿ : ಪ್ರಧಾನಿ ಮೋದಿಗೆ ಮಣ್ಣಿನಿಂದ ಮಾಡಿದ ರಸಗುಲ್ಲಾ ನೀಡುತ್ತೇನೆ ಎಂದ ಮಮತಾ ಬ್ಯಾನರ್ಜಿಗೆ ಪ್ರಧಾನಿ ಮೋದಿ ಅವರು ತಕ್ಕ ಉತ್ತರ ನೀಡಿದ್ದಾರೆ. 




ಅಕ್ಷಯ್ ಕುಮಾರ್ ಜೊತೆಗಿನ ಸಂದರ್ಶನದಲ್ಲಿ ಪ್ರಧಾನಿ ತಮಗೆ ಮಮತಾ ಬ್ಯಾನರ್ಜಿ ಪ್ರತೀ ವರ್ಷ ಕುರ್ತಾ ಮತ್ತು ಸಿಹಿಯನ್ನ ಕಳುಹಿಸುತ್ತಾರೆ ಎಂದು ಹೇಳಿದ್ದರು. ಇದರಿಂದ ಆಕ್ರೋಶ ಗೊಂಡ ಸಿಎಂ ಮಮತಾ ಬ್ಯಾನರ್ಜಿ, ಮೋದಿಗೆ ಜೇಡಿಮಣ್ಣು ಮತ್ತು ಕಲ್ಲುಗಳಿರುವ ರಸಗುಲ್ಲಾಗಳನ್ನ ಕೊಡುತ್ತೇವೆ. ಈ ರಸಗುಲ್ಲಾ ತಿಂದು ಮೋದಿಯ ಎಲ್ಲಾ ಹಲ್ಲುಗಳೂ ಉದುರಿಹೋಗಬೇಕು ಎಂದು ಕಿಡಿಕಾರಿದ್ದರು.


ಈ ಹೇಳಿಕೆಗೆ ಸಮಾಧಾನದಿಂದ ಪ್ರತಿಕ್ರಿಯೆ ನೀಡಿದ ಪ್ರಧಾನಿ ಮೋದಿಯವರು, ಬಂಗಾಳ ರಾಮಕೃಷ್ಣ ಪರಮಹಂಸ, ಸ್ವಾಮಿ ವಿವೇಕಾನಂದ, ಜೆಸಿ ಬೋಸ್, ನೇತಾಜಿ ಸುಭಾಶ್ ಚಂದ್ರ ಬೋಸ್ ಅಂತಹ ಪೂಜ್ಯರು ಜನಿಸಿದ ನಾಡಿನ ಮಣ್ಣು, ಇಂಥಹ ಮಣ್ಣಿನಿಂದ ಮಾಡಿದ ರಸಗುಲ್ಲಾಗಳನ್ನು ಪಡೆಯುವುದು ನನ್ನ ಭಾಗ್ಯ, ಅದನ್ನು ನಾನು ಪ್ರಸಾದದಂತೆ ಸ್ವೀಕರಿಸುತ್ತೇನೆ ಎಂದು ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.


 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಿದ್ದರಾಮಯ್ಯ ಸಿಎಂ ಸ್ಥಾನ ಬಿಟ್ಟುಕೊಡಲ್ಲ, ಡಿಕೆಶಿ ಆ ಸ್ಥಾನದಲ್ಲಿ ಮುಂದುವರೆಯಲು ಬಿಡಲ್ಲ: ಪ್ರಹ್ಲಾದ್ ಜೋಶಿ

ರೈಲಿನ ಎಸಿ ಕೋಚ್‌ನಲ್ಲಿ ಕೆಟಲ್‌ನಲ್ಲಿ ನೂಡಲ್ಸ್ ಮಾಡಿದ ಮಹಿಳೆಗೆ ಇದೀಗ ಢವಢವ

ನವೆಂಬರ್ ಕ್ರಾಂತಿ ಬಿಸಿ ನಡುವೆ ಹೊಸ ಬಾಂಬ್ ಸಿಡಿಸಿದ ಎಚ್ ಡಿ ಕುಮಾರಸ್ವಾಮಿ

ORS ಬ್ರ್ಯಾಂಡ್‌ನ ಪೇಯಗಳನ್ನು ಹಿಂಪಡೆಯಲು FSSAI ಸೂಚನೆ

ಡಿಕೆ ಬ್ರದರ್ಸ್ ತಲೆ ಮೇಲೆ ಕೈಯಿಟ್ಟು ಆಣೆ ಮಾಡಿದ್ರು ಸಿದ್ದರಾಮಯ್ಯ: ಎಚ್ ವಿಶ್ವನಾಥ್ ಹೊಸ ಬಾಂಬ್

ಮುಂದಿನ ಸುದ್ದಿ
Show comments