Select Your Language

Notifications

webdunia
webdunia
webdunia
webdunia

70,000 ನೇಮಕಾತಿ ಪತ್ರ ವಿತರಿಸಿದ ಪ್ರಧಾನಿ ನರೇಂದ್ರ ಮೋದಿ

70,000 ನೇಮಕಾತಿ ಪತ್ರ ವಿತರಿಸಿದ ಪ್ರಧಾನಿ ನರೇಂದ್ರ ಮೋದಿ
ನವದೆಹಲಿ , ಬುಧವಾರ, 14 ಜೂನ್ 2023 (11:01 IST)
ನವದೆಹಲಿ : ರೋಜಗಾರ್ ಮೇಳದ ಭಾಗವಾಗಿ ಪ್ರಧಾನಿ ನರೇಂದ್ರ ಮೋದಿ 70,000 ನೇಮಕಾತಿ ಪತ್ರಗಳನ್ನು ವಿತರಿಸಿದ್ದಾರೆ. ವೀಡಿಯೋ ಕಾನ್ಫರೆನ್ಸ್ ಮೂಲಕ ನಡೆದ ಕಾರ್ಯಕ್ರಮದಲ್ಲಿ ಭಾಗಿಯಾದ ಅವರು, ರೈಲ್ವೆ, ಅಂಚೆ, ಕಂದಾಯ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಭರ್ತಿಯಾದ ನೌಕರರಿಗೆ ನೇಮಕಾತಿ ಪತ್ರ ನೀಡಿದರು.
 

ಕಾರ್ಯಕ್ರಮದ ಬಳಿಕ ಮಾತನಾಡಿದ ಅವರು, ಅಜಾದಿ ಕಾ ಅಮೃತ್ ಕಾಲ ಪ್ರಾರಂಭವಾಗಿರುವ ಹಿನ್ನಲೆ ಈ ಅವಧಿಯಲ್ಲಿ ಸರ್ಕಾರಿ ಸೇವೆಗಳಿಗೆ ಸೇರ್ಪಡೆಯಾಗುವವರು ಮುಂದಿನ 25 ವರ್ಷಗಳಲ್ಲಿ ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡುವ ಗುರಿ ಹೊಂದಿರುತ್ತಾರೆ. ರೋಜಗಾರ್ ಮೇಳ ಎನ್ಡಿಎ – ಬಿಜೆಪಿ ಸರ್ಕಾರದ ಹೊಸ ಗುರುತು ಎಂದರು.

ಈ ವೇಳೆ ವಿಪಕ್ಷಗಳನ್ನು ತರಾಟೆಗೆ ತೆಗೆದುಕೊಂಡ ಅವರು, ರಾಜಕೀಯ ಭ್ರಷ್ಟಾಚಾರ, ಯೋಜನೆಗಳಲ್ಲಿನ ಅವ್ಯವಹಾರಗಳು, ಸಾರ್ವಜನಿಕ ಹಣವನ್ನು ದುರುಪಯೋಗಪಡಿಸಿಕೊಳ್ಳುವುದು ಅವರ ಗುರುತು ಎಂದು ವಾಗ್ದಾಳಿ ನಡೆಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಭಾರತದ ಪತ್ರಕರ್ತನಿಗೆ ದೇಶ ತೊರೆಯುವಂತೆ ಸೂಚಿಸಿದ ಚೀನಾ!