Select Your Language

Notifications

webdunia
webdunia
webdunia
webdunia

ಕೊರೊನಾ ನಿಯಂತ್ರಿಸಲು ದೇಶದ ಜನತೆಯ ಸಲಹೆ ಕೇಳಿದ ಪ್ರಧಾನಿ ಮೋದಿ

ಕೊರೊನಾ ನಿಯಂತ್ರಿಸಲು ದೇಶದ ಜನತೆಯ ಸಲಹೆ ಕೇಳಿದ ಪ್ರಧಾನಿ ಮೋದಿ
ನವದೆಹಲಿ , ಸೋಮವಾರ, 15 ಜೂನ್ 2020 (09:20 IST)
ನವದೆಹಲಿ : ಕೊರೊನಾ ನಿಯಂತ್ರಿಸುವ ಕುರಿತಾಗಿ ಸಾರ್ವಜನಿಕರು ಸಲಹೆ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.


ದೇಶದಲ್ಲಿ ಸೋಂಕಿತರ ಸಂಖ್ಯೆ 3 ಲಕ್ಷ ಗಡಿ ದಾಟಿದೆ. ಇದರಿಂದ ಆತಂಕಗೊಂಡಿರುವ ಮೋದಿ, ಕೊರೊನಾ ವೈರಸ್ ಬಗ್ಗೆ ಚರ್ಚಿಸಲು ಸಾಕಷ್ಟು ವಿಚಾರಗಳು ನಿಮ್ಮ ಬಳಿ ಇದೆ. ನಿಮ್ಮ ವಿಚಾರಗಳನ್ನು ಹಂಚಕೊಳ್ಳಿ. 130ಕೋಟಿ ಜನರ ಅಭಿಪ್ರಾಯ ನನಗೆ ಮತ್ತಷ್ಟು ಬಲ ತಂದುಕೊಡಲಿದೆ ಮತ್ತು ಹೆಚ್ಚು ಅಂಶಗಳನ್ನು, ವಿಚಾರಧಾರೆಗಳನ್ನು ಹೊಂದಲು ಸಹಕಾರಿಯಾಗಲಿದೆ ಎಂದು ಟ್ವೀಟ್ ಮೂಲಕ ದೇಶದ ಜನತೆಗೆ ಮನವಿ ಮಾಡಿದ್ದಾರೆ.


ಅಲ್ಲದೇ ಜನರ ಉತ್ತಮ ಸಲಹೆಗಳನ್ನು ಜೂನ್ 28ರ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಹಂಚಿಕೊಳ್ಳುವುದಾಗಿ ಹೇಳಿದ್ದಾರೆ. ಇದಕ್ಕಾಗಿ 2 ವಾರಗಳ ಕಾಲಾವಕಾಶವಿದ್ದು, ಟಾಲ್ ಫ್ರೀ ಸಂಖ್ಯೆ 1800-11-7800ಗೆ ಕರೆ ಮಾಡುವಂತೆ ಅಥವಾ NAMO ಮತ್ತು Mygov  ಆ್ಯಪ್ ನಲ್ಲಿ ತಮ್ಮ ಸಲಹೆಗಳನ್ನು ಹಂಚಿಕೊಳ್ಳುವಂತೆ ಕೋರಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಮೇರಿಕಾದಲ್ಲಿ ಮತ್ತೊಬ್ಬ ಕಪ್ಪುವರ್ಣೀಯನ ಹತ್ಯೆ; ಮತ್ತೆ ಭುಗಿಲೆದ್ದ ಪ್ರತಿಭಟನೆ