Select Your Language

Notifications

webdunia
webdunia
webdunia
webdunia

ರಾಷ್ಟ್ರಪತಿ ಚುನಾವಣೆ: ಸಿದ್ಧಾಂತಗಳ ನಡುವಿನ ಹೋರಾಟ- ಮೀರಾ ಕುಮಾರ್

ರಾಷ್ಟ್ರಪತಿ ಚುನಾವಣೆ: ಸಿದ್ಧಾಂತಗಳ ನಡುವಿನ ಹೋರಾಟ- ಮೀರಾ ಕುಮಾರ್
ನವದೆಹಲಿ , ಮಂಗಳವಾರ, 27 ಜೂನ್ 2017 (18:48 IST)
ನವದೆಹಲಿ:ಇದು ಜಾತಿಗಳ ನಡುವಿನ ಹೋರಾಟವಲ್ಲ ಬದಲಾಗಿ ಸಿದ್ಧಾಂತಗಳ ನಡುವಿನ ಹೋರಾಟ ಎಂದು ರಾಷ್ಟ್ರಪತಿ ಚುನಾವಣಾ ಅಭ್ಯರ್ಥಿಗಳ ಕುರಿತಾಗಿನ ಚರ್ಚೆಗೆ ಸಂಬಂಧಿಸಿದಂತೆ ಮೀರಾ ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.
 
ಬಿಜೆಪಿ ಹಾಗೂ ಯುಪಿಎ ದಲಿತ ಅಭ್ಯರ್ಥಿಗಳನ್ನೇ ಕಣಕ್ಕಿಳಿಸಿದ್ದಾರೆ. ದೇಶದ ಅತ್ಯುನ್ನತ ಹುದ್ದೆಗೆ ದಲಿತರಿಬ್ಬರು ಸ್ಪರ್ಧಿಸುತ್ತಿದ್ದಾರೆ ಎಂಬ ವ್ಯಾಪಕ ಚರ್ಚೆಗೆ ಸಂಬಂಧಿಸಿದಂತೆ ಮಾತನಾಡಿರುವ ಮೀರಾ ಕುಮಾರ್ ಹಲವರು ಅಭ್ಯರ್ಥಿಗಳಿಗಿರುವ ಸಾಮರ್ಥ್ಯ ಹಾಗೂ ದೌರ್ಬಲ್ಯಗಳನ್ನು ಬಿಟ್ಟು ಕೇವಲ ಅವರ ಜಾತಿಯ ಕುರಿತು ಚಿಂತಿಸುತ್ತಿದ್ದಾರೆ. ಇದು ಸಮಾಜದ ನೈಜ ಮನಸ್ಥಿತಿಯನ್ನು ಪ್ರತಿಧ್ವನಿಸುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
 
ಪ್ರಜಾಪ್ರಭುತ್ವದ ಮೌಲ್ಯ, ಸಾಮಾಜಿಕ ನ್ಯಾಯ, ಸಮಾನತೆ ಸಿದ್ಧಾಂತದ ಆಧಾರದ ಮೇಲೆ ಚುನಾವಣೆಯನ್ನು ಎದುರಿಸಲು ಸಿದ್ಧವಾಗಿದ್ದು, ಗುಜರಾತಿನ ಶಬರಮತಿ ಆಶ್ರಮದಿಂದ ಚುನಾವಣಾ ಪ್ರಚಾರ ಆರಂಭಿಸುವುದಾಗಿ ತಿಳಿಸಿದ್ದಾರೆ.
 

Share this Story:

Follow Webdunia kannada

ಮುಂದಿನ ಸುದ್ದಿ

ದೆಹಲಿಗೆ ಸಿಎಂ ಸಿದ್ದರಾಮಯ್ಯ: ಸಚಿವ ಸ್ಥಾನದ ಆಕಾಂಕ್ಷಿಗಳೂ ದೆಹಲಿಯತ್ತ