Select Your Language

Notifications

webdunia
webdunia
webdunia
webdunia

ಮರಣದಂಡನೆ ಕೈದಿಗಳಿಗೆ ರಾಷ್ಟ್ರಪತಿ ಪ್ರಣಬ್ ಬಳಿ ಇಲ್ಲ ಕರುಣೆ

ಮರಣದಂಡನೆ ಕೈದಿಗಳಿಗೆ ರಾಷ್ಟ್ರಪತಿ ಪ್ರಣಬ್ ಬಳಿ ಇಲ್ಲ ಕರುಣೆ
ನವದೆಹಲಿ , ಶನಿವಾರ, 20 ಆಗಸ್ಟ್ 2016 (15:31 IST)
ಮರಣದಂಡನೆಗೊಳಗಾಗಿ ತಮ್ಮ ಬಳಿ ಕ್ಷಮಾದಾನಕ್ಕೆ ಅರ್ಜಿ ಸಲ್ಲಿಸುವ ಕೈದಿಗಳಿಗೆ ಕ್ಷಮಾದಾನ ನೀಡಲು ರಾಷ್ಟ್ರಪತಿ ಪ್ರಣವ್ ಮುಖರ್ಜಿ ಹೆಚ್ಚು ಕಡಿಮೆ ಇಷ್ಟಪಡುವುದಿಲ್ಲ. ಅಧಿಕಾರವನ್ನು ವಹಿಸಿಕೊಂಡಾಗಿನಿಂದ ಇಲ್ಲಿಯವರೆಗೆ ದಾಖಲೆ ಸಂಖ್ಯೆಯಲ್ಲಿ 37 ಅರ್ಜಿಗಳನ್ನು ಅವರು ತಿರಸ್ಕರಿಸಿದ್ದಾರೆ. 
 
ಅವರ ತಿರಸ್ಕರಿಸಿದ ಅರ್ಜಿಗಳಲ್ಲಿ 26/11 ಮುಂಬೈ ಉಗ್ರ ದಾಳಿ ಅಪರಾಧಿ ಅಜ್ಮಲ್ ಕಸಬ್ (ನವೆಂಬರ್ 21, 2012ರಲ್ಲಿ ಗಲ್ಲಿಗೇರಿದ), ಸಂಸತ್ ದಾಳಿ ಅಪರಾಧಿ ಅಫ್ಜಲ್ ಗುರು (ಫೆಬ್ರವರಿ 10, 2013ರಂದು ಗಲ್ಲಿಗೇರಿದ) ಮತ್ತು ಯಾಕೂಬ್ ಮೆಮನ್ 1993ರಲ್ಲಿ ನಡೆದ ಮುಂಬೈ ಸರಣಿ ದಾಳಿ ಅಪರಾಧಿ ( ಜುಲೈ 30, 2015 ರಂದು ಗಲ್ಲಿಗೇರಿದ) ಅವರದು ಕೂಡ ಸೇರಿದೆ.  ಈ ಎಲ್ಲ ಪ್ರಕರಣಗಳು ಮರಣದಂಡನೆ ಶಿಕ್ಷೆ ರದ್ದು ಕುರಿತಂತೆ ದೇಶಾದ್ಯಂತ ಚರ್ಚೆ ಏಳಲು ಪ್ರಚೋದನೆ ನೀಡಿದವು.
 
ಈ ದಾಖಲೆಯ ಆಧಾರದ ಮೇಲೆ ನೋಡಿದರೆ ತಮ್ಮ ಅಧಿಕಾರಾವಧಿ ಮುಗಿಯುವವರೆಗೆ (ಜುಲೈ 25) ಅತಿ ಹೆಚ್ಚು ಕ್ಷಮಾದಾನ ಅರ್ಜಿಗಳನ್ನು ತಿರಸ್ಕರಿಸಿದ ರಾಷ್ಟ್ರಪತಿ ಎಂದೆನಿಸಿಕೊಳ್ಳುವುದರಲ್ಲಿ ಸಂದೇಹವಿಲ್ಲ.
 
ಇತ್ತೀಚಿಗೆ ತಿರಸ್ಕೃತವಾದ ಅರ್ಜಿ ಎಂದರೆ, ಹೊಶಿಯಾರ್ಪುರದ ನಿವಾಸಿಗಳಾದ ವಿಕ್ರಮ್ ಸಿಂಗ್ ವಾಲಿಯಾ ಮತ್ತು ಜಸ್ವೀರ್ ಸಿಂಗ್ ಎಂಬುವವರು ಸಲ್ಲಿಸಿದ್ದ ಕ್ಷಮಾದಾನ ಅರ್ಜಿ. ಅವರಿಬ್ಬರು 16 ವರ್ಷದ ಬಾಲಕನನ್ನು ಕೊಂದ ಅಪರಾಧಕ್ಕೆ ಗಲ್ಲು ಶಿಕ್ಷೆಗೊಳಗಾಗಿದ್ದಾರೆ. ಸುಪ್ರೀಂ ಕೋರ್ಟ್ ಮೇ 2012ರಲ್ಲಿ ಅವರಿಗೆ ಗಲ್ಲು ಶಿಕ್ಷೆಯನ್ನು ವಿಧಿಸಿತ್ತು. ರಾಷ್ಟ್ರಪತಿ ಬಳಿ ಹೋಗಿದ್ದ ಅವರ ಕ್ಷಮಾದಾನ ಅರ್ಜಿ ಆಗಸ್ಟ್ 7 ರಂದು ತಿರಸ್ಕೃತವಾಗಿದೆ.
 
ಮುಖರ್ಜಿ ಅವರಿಂದ ತಿರಸ್ಕೃತಗೊಂಡ ಅರ್ಜಿಗಳ ಸಂಖ್ಯೆ ಏಕೆ ಮಹತ್ವವನ್ನು ಪಡೆಯುತ್ತದೆ ಅಂದರೆ ಸ್ವಾತಂತ್ರ್ಯಾ ನಂತರ ಇಲ್ಲಿಯವರೆಗೆ 7,012 ಜನರಿಗೆ ಮರಣದಂಡನೆ ಶಿಕ್ಷೆಯನ್ನು ಆದೇಶಿಸಲಾಗಿತ್ತು. ಅವರಲ್ಲಿ 58 ಜನರನ್ನು ಮಾತ್ರ ಇಲ್ಲಿಯವರೆಗೆ ಗಲ್ಲಿಗೇರಿಸಲಾಗಿದೆ. 
 
ಮುಖರ್ಜಿ ಕೇವಲ ಎರಡು ಪ್ರಕರಣಗಳಲ್ಲಿ ಮಾತ್ರ ಮರಣದಂಡನೆ ಶಿಕ್ಷೆಯನ್ನು ಜೀವಾವಧಿಗೆ ಬದಲಾಯಿಸಲು ಸಮ್ಮತಿ ಸೂಚಿಸಿದ್ದಾರೆ. 
 
ಈ ಹಿಂದೆ ರಾಷ್ಟ್ರಪತಿಯಾಗಿದ್ದ ಪ್ರತಿಭಾ ಪಟೇಲ್ ಕ್ಷಮಾದಾನ ಅರ್ಜಿಗಳನ್ನು ಮಾನ್ಯ ಮಾಡುವುದರಲ್ಲಿ ಗುರುತಿಸಿಕೊಂಡಿದ್ದರು. 35 ಅಪರಾಧಿಗಳಿಗೆ ಜೀವದಾನ ನೀಡಿದ್ದ ಅವರು ತಮ್ಮ ಈ ನಡೆಗಾಗಿ ಸಾಕಷ್ಟು ಟೀಕೆಗಳನ್ನು ಸಹ ಎದುರಿಸಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಮಲತಾಯಿ ಮೇಲಿನ ಕೋಪಕ್ಕೆ 17 ಮಹಿಳೆಯರಿಗೆ ಇರಿದ