Select Your Language

Notifications

webdunia
webdunia
webdunia
webdunia

ಮಲತಾಯಿ ಮೇಲಿನ ಕೋಪಕ್ಕೆ 17 ಮಹಿಳೆಯರಿಗೆ ಇರಿದ

ಮಲತಾಯಿ ಮೇಲಿನ ಕೋಪಕ್ಕೆ 17 ಮಹಿಳೆಯರಿಗೆ ಇರಿದ
ರಾವಲ್ಪಿಂಡಿ , ಶನಿವಾರ, 20 ಆಗಸ್ಟ್ 2016 (15:28 IST)
ಪಾಕಿಸ್ತಾನ ಪೊಲೀಸರು ಇತ್ತೀಚಿಗೆ ಕ್ರೂರ, ಸ್ತ್ರೀದ್ವೇಷಿ ಆರೋಪಿಯನ್ನು ಬಂಧಿಸಿದ್ದಾರೆ. ಈ ವಿಕ್ಷಿಪ್ತ ಮನುಷ್ಯ ವಿಕೃತ ಸಂತೋಷಕ್ಕಾಗಿ ಮಹಿಳೆಯರ ಮೇಲೆ ಮಾರಣಾಂತಿಕ ದಾಳಿ ನಡೆಸುತ್ತಿದ್ದ. ಕಳೆದ ಜನೇವರಿ ತಿಂಗಳಿಂದ ಇಲ್ಲಿಯವರೆಗೆ ಆತ 17 ಮಹಿಳೆಯರ ಮೇಲೆ ದಾಳಿ ನಡೆಸಿದ್ದು ಅವರಲ್ಲಿ ಒಬ್ಬಾಕೆ ಮೃತಳಾಗಿದ್ದಾಳೆ ಎಂದು ತಿಳಿದು ಬಂದಿದೆ. 
ಈ ವಿಕೃತ ಮನಸ್ಸಿನ ದುಷ್ಕರ್ಮಿಯನ್ನು 22 ವರ್ಷದ ಮಹಮ್ಮದ್ ಅಲಿ ಎಂದು ಗುರುತಿಸಲಾಗಿದ್ದು ತನ್ನ ಪಾಪಕೃತ್ಯಗಳನ್ನಾತ ಒಪ್ಪಿಕೊಂಡಿದ್ದಾನೆ ಎಂದು ರಾವಲ್ಪಿಂಡಿಯ ಗರ್ರಿಸನ್ ಸಿಟಿಯ ಪೊಲೀಸರು ತಿಳಿಸಿದ್ದಾರೆ. ಮಲತಾಯಿಯ ಕ್ರೂರ ವರ್ತನೆ, ಆಕೆ ನನಗೆ ನೀಡಿದ ಹಿಂಸೆ ಮಹಿಳೆಯರ ಮೇಲೆ ಪ್ರತೀಕಾರವನ್ನು ಹುಟ್ಟಿಸಿತು. ಯಾವುದೇ ವಯಸ್ಸಿನ ಮಹಿಳೆಯರನ್ನು ಕಂಡಾಗ ಅವರನ್ನು ಗುರಿಯಾಗಿಸಿ ದಾಳಿ ಮಾಡಿ ಕೊಲ್ಲಬೇಕು ಎಂದು ಅನ್ನಿಸುತ್ತಿತ್ತು ಎಂದಾತ ತನ್ನ ವಿಕ್ಷಿಪ್ತತೆ ಹಿಂದಿನ ಕಾರಣವನ್ನು ಬಿಚ್ಚಿಟ್ಟಿದ್ದಾನೆ.
 
ದಾರಿಯಲ್ಲಿ ಕಾದು ಕುಳಿತುಕೊಳ್ಳುತ್ತಿದ್ದ ಆತ ಅವಕಾಶ ಸಿಗುತ್ತಿದ್ದಂತೆ ಮಹಿಳೆಯರ ಮೇಲೆ ದಾಳಿ ನಡೆಸುತ್ತಿದ್ದ. ಆತನ ಕೊನೆಯ ಬಲಿಪಶು ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ನರ್ಸ್. ಗಂಭೀರವಾಗಿ ಗಾಯಗೊಂಡಿದ್ದ ಆಕೆ ಆಸ್ಪತ್ರೆಯಲ್ಲಿ ಅಸುನೀಗಿದಳು. ಹಲ್ಲೆ ನಡೆಸಲು ಆತ ಚಾಕುವನ್ನು ಬಳಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.  
 
ಎಲ್ಲ ದಾಳಿಗಳು ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್‌ಗೆ ಹತ್ತಿರವಿರುವ ರಾವಲ್ಪಿಂಡಿಯಲ್ಲಿಯೇ ನಡೆದಿವೆ.

Share this Story:

Follow Webdunia kannada

ಮುಂದಿನ ಸುದ್ದಿ

ಮೋದಿಗಾಗಿ 'ಅಸತೋಮಾ ಸದ್ಗಮಯ' ಹೇಳಿದ ರಾಹುಲ್