Select Your Language

Notifications

webdunia
webdunia
webdunia
webdunia

ಮೋದಿಗಾಗಿ 'ಅಸತೋಮಾ ಸದ್ಗಮಯ' ಹೇಳಿದ ರಾಹುಲ್

ಮೋದಿಗಾಗಿ 'ಅಸತೋಮಾ ಸದ್ಗಮಯ' ಹೇಳಿದ ರಾಹುಲ್
ನವದೆಹಲಿ , ಶನಿವಾರ, 20 ಆಗಸ್ಟ್ 2016 (15:26 IST)
ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ಪ್ರಧಾನಿ ಮೋದಿ ಅವರನ್ನು ವಿಭಿನ್ನ ರೀತಿಯಲ್ಲಿ ಕಿಚಾಯಿಸಿದ್ದಾರೆ. ಮೋದಿಗಾಗಿ ಅವರು ತಮ್ಮ ಟ್ವಿಟರ್‌ನಲ್ಲಿ ಒಂದು ಪ್ರಾರ್ಥನೆಯನ್ನು ಪ್ರಕಟಿಸಿದ್ದಾರೆ- "ಅವರನ್ನು ಅಜ್ಞಾನದಿಂದ ಸತ್ಯದೆಡೆ ನಡೆಸು".

ಬ್ರಿಟಿಷ್ ಆಡಳಿತದ ಕಾಲದಲ್ಲಿ ಕಾಂಗ್ರೆಸ್ ಎದುರಿಸಿದ ಕಷ್ಟಗಳಿಗಿಂತ ಹೆಚ್ಚಿನ ಪ್ರತಿಕೂಲ ಸಂದರ್ಭಗಳನ್ನು ಬಿಜೆಪಿ ಸ್ವಾತಂತ್ರ್ಯೋತ್ತರದ ದಿನಗಳಲ್ಲಿ ಎದುರಿಸಿದೆ ಎಂಬ ಮೋದಿ ಮಾತುಗಳಿಗೆ ಪ್ರತಿಯಾಗಿ ರಾಹುಲ್ ಈ ಟ್ವೀಟ್ ಮಾಡಿದ್ದಾರೆ. 
 
"ಮೋದಿಜೀ ನಿಮಗಾಗಿ ಪ್ರಾರ್ಥನೆ: ಅಸತೋಮಾ ಸದ್ಗಮಯ ತಮಸೋಮಾ ಜ್ಯೋತಿರ್ಗಮಯ ಮೃತ್ಯೋರ್ಮಾ ಅಮೃತಂ ಗಮಯಾ ಓಂ ಶಾಂತಿ ಶಾಂತಿ", ಉಪನಿಷದ್‌ನಲ್ಲಿ ಕಂಡು ಬರುವ ಶ್ಲೋಕವನ್ನು ರಾಹುಲ್ ಪ್ರಕಟಿಸಿದ್ದಾರೆ. 
 
"ನನ್ನನ್ನು ಅಜ್ಞಾನದಿಂದ ಸತ್ಯದೆಡೆ ನಡೆಸು " - ಕತ್ತಲೆಯಿಂದ ಬೆಳಕಿನೆಡೆ - ಸಾವಿನಿಂದ ಅಮರತ್ವದ ಕಡೆಗೆ. ಎಲ್ಲ ಜೀವಸೃಷ್ಟಿಗಳಿಗೂ ಶಾಂತಿ ಸಿಗಲಿ" - ಎಂಬುದು ಈ ಶ್ಲೋಕದ ಭಾವಾರ್ಥ. ಇದನ್ನು ಸಹ ರಾಹುಲ್ ಪ್ರಕಟಿಸಿದ್ದಾರೆ.
 
ಈ ಹೇಳಿಕೆಯನ್ನು ನೀಡುವುದರ ಮೋದಿ ಅವರು ಸ್ವಾತಂತ್ರ ಹೋರಾಟಗಾರರಿಗೆ ಅಪಮಾನ ಮಾಡಿದ್ದಾರೆ. ಅವರು ಕ್ಷಮೆಯಾಚಿಸಬೇಕು ಎಂದು ಎಐಸಿಸಿ ವಕ್ತಾರ ಆನಂದ ಶರ್ಮಾ ಆಗ್ರಹಿಸಿದ್ದಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

ನಾಯಿ ಎನ್ನಿ ಸಹಿಸುತ್ತೇನೆ, ಆದರೆ ಪಾಕಿಸ್ತಾನಿ ಎನ್ನಬೇಡಿ: ಬಲೋಚ್ ನಿರಾಶ್ರಿತ