Select Your Language

Notifications

webdunia
webdunia
webdunia
webdunia

ಜನ್ಮಾಷ್ಟಮಿ ಪ್ರಯುಕ್ತ ದೇಶಕ್ಕೆ ಮೋದಿ ಶುಭಾಶಯ

President
ನವದೆಹಲಿ , ಗುರುವಾರ, 25 ಆಗಸ್ಟ್ 2016 (16:57 IST)
ಶ್ರೀಕೃಷ್ಣ ಜನ್ಮಾಷ್ಟಮಿ ಪವಿತ್ರ ಗಳಿಗೆಯಲ್ಲಿ ಪ್ರಧಾನಿ ಮೋದಿ ದೇಶಕ್ಕೆ ಶುಭ ಹಾರೈಕೆಗಳನ್ನು ಕೋರಿದ್ದಾರೆ. 
 
ಎಲ್ಲರಿಗೂ ಜನ್ಮಾಷ್ಟಮಿ ಶುಭಾಸಯಗಳು ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ. 
 
ಜನ್ಮಾಷ್ಟಮಿ ಹಿಂದಿನ ದಿನ ಅಂದರೆ ಬುಧವಾರ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ಸಹ ಟ್ವಿಟ್ಟರ್ ಮೂಲಕ ದೇಶಬಾಂಧವರಿಗೆ ಶುಭ ಕೋರಿದ್ದರು. 
 
ಕೃಷ್ಣನ ಜೀವನ ಮತ್ತು ಬೋಧನೆ ಪ್ರತಿಫಲಾಕ್ಷೆ ಇಲ್ಲದೆ ಕರ್ತವ್ಯವನ್ನು ಮಾಡಿ ಎಂಬುದನ್ನು ತೋರಿಸುತ್ತದೆ. ಕೃಷ್ಣನ ಜನ್ಮದಿನದಂದು ಮಾತು, ಕೃತಿಗಳ, ಚಿಂತನೆಯಲ್ಲಿ ಸತ್ಯ ಮತ್ತು ನೀತಿಯನ್ನು ಅಳವಡಿಸಿಕೊಳ್ಳೋಣ ಎಂದು ಮುಖರ್ಜಿ ಸಂದೇಶ ಕಳುಹಿಸಿದ್ದಾರೆ. 
 
ಉಪರಾಷ್ಟ್ರಪತಿ ಮೊಹಮ್ಮದ್ ಅನ್ಸಾರಿ ಸಹ ದೇಶವಾಸಿಗಳಿಗೆ ಹಬ್ಬದ ಶುಭಾಶಯ ಕೋರಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೆಆರ್‌ಎಸ್ ನೀರಿಗಾಗಿ ತಮಿಳುನಾಡಿನಿಂದ ಒತ್ತಡ: ಅಗಸ್ಟ್ 27 ಸಭೆ ಕರೆದ ಸಿಎಂ ಸಿದ್ದರಾಮಯ್ಯ