Select Your Language

Notifications

webdunia
webdunia
webdunia
webdunia

ಶಾಲೆ, ಕಾಲೇಜು ಆರಂಭಕ್ಕೆ ಸಿದ್ಧತೆ

ಶಾಲೆ, ಕಾಲೇಜು ಆರಂಭಕ್ಕೆ ಸಿದ್ಧತೆ
ರಾಮನಗರ , ಭಾನುವಾರ, 22 ಆಗಸ್ಟ್ 2021 (09:21 IST)
ರಾಮನಗರ: ಇದೇ 23ರಿಂದ ಜಿಲ್ಲೆಯಾದ್ಯಂತ ಪ್ರೌಢಶಾಲೆಗಳು ಹಾಗೂ ಪದವಿಪೂರ್ವ ಕಾಲೇಜುಗಳು ಬಾಗಿಲು ತೆರೆಯಲಿವೆ. ಇದಕ್ಕಾಗಿ ಶನಿವಾರ ಶಿಕ್ಷಣ ಕೇಂದ್ರಗಳಲ್ಲಿ ಸಿದ್ಧತೆ ನಡೆದಿತ್ತು.
ಸೋಮವಾರದಿಂದ ಪ್ರೌಢಶಾಲೆಗಳ 9 ಮತ್ತು 10ನೇ ತರಗತಿಗಳಲ್ಲಿ ಬೋಧನೆ ಆರಂಭ ಆಗಲಿದೆ.

ಅಂತೆಯೇ ಪ್ರಥಮ ಹಾಗೂ ದ್ವಿತೀಯ ಪಿಯು ತರಗತಿಗಳಿಗೂ ಚಾಲನೆ ದೊರೆಯಲಿದೆ. ಈ ಮೂಲಕ ಈ ವರ್ಷದ ಶೈಕ್ಷಣಿಕ ಚಟುವಟಿಕೆಗಳಿಗೆ ಅಧಿಕೃತ ಚಾಲನೆ ದೊರೆಯಲಿದೆ. ಇವುಗಳಲ್ಲಿನ ಪರಿಸ್ಥಿತಿ ನೋಡಿಕೊಂಡು ಸರ್ಕಾರವು ಉಳಿದ ಹಂತದ ತರಗತಿಗಳನ್ನು ತೆರೆಯುವ ನಿರ್ಧಾರ ಮಾಡಲಿದೆ.
ಕಳೆದ ಜುಲೈ 15ರಂದೇ ಶಾಲೆಗಳು ತೆರೆದಿದ್ದವಾದರೂ ಕೇವಲ ಶಿಕ್ಷಕರು ಮಾತ್ರ ತರಗತಿಗಳಿಗೆ ಬರುತ್ತಿದ್ದರು. ಮಕ್ಕಳಿಗೆ ಆನ್ಲೈನ್ ವೇದಿಕೆ ಮೂಲಕವೇ ಪಾಠ ಮುಂದುವರಿದಿತ್ತು. ಇದೀಗ ಭೌತಿಕ ತರಗತಿಗಳಿಗೂ ಚಾಲನೆ ದೊರೆಯುತ್ತಿದೆ. ಈ ಹಾಜರಾಗುವ ವಿದ್ಯಾರ್ಥಿಗಳು ತಮ್ಮ ಪೋಷಕರಿಗೆ ಅನುಮತಿ ಪತ್ರ ಕಡ್ಡಾಯವಾಗಿ ತೆಗೆದುಕೊಂಡು ಬರುವುದು ಕಡ್ಡಾಯವಾಗಿದೆ. ಒಂದೊಮ್ಮೆ ಭೌತಿಕ ತರಗತಿಗೆ ಹಾಜರಾಗಲು ವಿದ್ಯಾರ್ಥಿಗಳು ನಿರಾಕರಿಸಿದರೆ ಅಂತಹವರಿಗೆ ಆನ್ಲೈನ್ ತರಗತಿ ಮುಂದುವರಿಸಲಾಗುತ್ತದೆ.
ಪಾಳಿ ಆಧಾರದಲ್ಲಿ ತರಗತಿ: ಕೋವಿಡ್ ನಿಯಮಾವಳಿ ಹಿನ್ನೆಲೆಯಲ್ಲಿ ಪಾಳಿ ಆಧಾರದಲ್ಲಿ ತರಗತಿಗಳನ್ನು ನಡೆಸುವಂತೆ ಶಿಕ್ಷಣ ಇಲಾಖೆ ಸೂಚನೆ ನೀಡಿದೆ. ಅದರಂತೆ ಪ್ರತಿ ಬ್ಯಾಚ್ನಲ್ಲಿ ಒಂದು ತರಗತಿಯಲ್ಲಿ 20 ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗುತ್ತದೆ. ಹೆಚ್ಚು ವಿದ್ಯಾರ್ಥಿಗಳು ಇರುವ ಶಾಲೆಯಲ್ಲಿ 5ರಿಂದ 6 ಬ್ಯಾಚ್ ಮಾಡಿಕೊಳ್ಳಲಾಗಿದೆ.
ಶಾಲೆಗಳಲ್ಲಿ ಬಿಸಿ ನೀರಿನ ವ್ಯವಸ್ಥೆಯೂ ಇರಲಿದೆ. ಆದರೆ ಬಿಸಿಯೂಟ ಯೋಜನೆಯನ್ನು ಸದ್ಯಕ್ಕೆ ಆರಂಭಿಸುತ್ತಿಲ್ಲ. ಮಧ್ಯಾಹ್ನ ಊಟಕ್ಕೆ ವಿದ್ಯಾರ್ಥಿಗಳಳು ಮನೆಗಳಿಗೆ ತೆರಳಿದ್ದಾರೆ. ಮಧ್ಯಾಹ್ನದ ನಂತರ ಎಂದಿನಂತೆ ಆನ್ಲೈನ್ ತರಗತಿ ನಡೆಯುತ್ತದೆ. ಶಿಕ್ಷಕರು ಭೌತಿಕ ತರಗತಿಗೆ ಹಾಜರಾಗಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ ಪರ್ಯಾಯ ಮಾರ್ಗದಲ್ಲಿ ಪಾಠ ಪ್ರವಚನ ನಡೆಸಿಕೊಡಲಿದ್ದಾರೆ.
ಒಂದೊಮ್ಮೆ ಭೌತಿಕ ತರಗತಿಗೆ ಹಾಜರಾಗುವ ವಿದ್ಯಾರ್ಥಿಗಳಲ್ಲಿ ಕೋವಿಡ್ -19 ಲಕ್ಷಣಗಳಾದ ನೆಗಡಿ, ಕೆಮ್ಮು, ಜ್ವರ ದಂತಹ ಲಕ್ಷಣಗಳು ಕಂಡು ಬಂದರೇ, ತಕ್ಷಣವೇ ಅವರನ್ನು ಮನೆಗೆ ಕಳುಹಿಸಿಕೊಡುವ ವ್ಯವಸ್ಥೆ ಮಾಡಲಾಗಿದೆ.
ಸಿದ್ಧತೆ: ಶನಿವಾರ ಬಹುತೇಕ ಶಾಲೆಗಳಲ್ಲಿ ಸ್ವಚ್ಛತಾ ಕಾರ್ಯಗಳು ನಡೆದವು. ಸ್ಥಳೀಯ ಆಡಳಿತ ಸಂಸ್ಥೆಗಳ ಸಿಬ್ಬಂದಿ ತಮ್ಮ ವ್ಯಾಪ್ತಿಯಲ್ಲಿನ ಸರ್ಕಾರಿ ಶಾಲೆಗಳಲ್ಲಿ ಸ್ಯಾನಿಟೈಸ್ ಮಾಡುವ ದೃಶ್ಯ ಕಂಡು ಬಂದಿತು. ಖಾಸಗಿ ಶಿಕ್ಷಣ ಸಂಸ್ಥೆಗಳೂ ತಮ್ಮ ಸಿಬ್ಬಂದಿಯನ್ನು ನಿಯೋಜಿಸಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದವು. ಶಾಲಾ ಆವರಣ, ಮೈದಾನ, ತೋಟಗಳು, ಕುಡಿಯುವ ನೀರಿನ ಟ್ಯಾಂಕ್, ಶೌಚಾಲಯ ಮೊದಲಾದವುಗಳಲ್ಲೂ ಸ್ವಚ್ಛತಾ ಕಾರ್ಯ ನಡೆಯಿತು.


Share this Story:

Follow Webdunia kannada

ಮುಂದಿನ ಸುದ್ದಿ

ದೇಶದಾದ್ಯಂತ ಸಂಭ್ರಮದ ರಕ್ಷಾ ಬಂಧನ: ಪ್ರಧಾನಿ ಮೋದಿ ಸೇರಿ ಗಣ್ಯರಿಂದ ಶುಭಾಶಯ