ಲಕ್ನೋ: ಅತ್ಯಾಚಾರಕ್ಕೊಳಗಾಗಿ ಗರ್ಭಿಣಿಯಾಗಿದ್ದ ಮಹಿಳೆಯನ್ನು ಆರೋಪಿ ಮನೆಗೆ ಕರೆದುಕೊಂಡು ಹೋಗಿ ಜೀವಂತ ದಹನ ಮಾಡಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಮೂರು ತಿಂಗಳ ಹಿಂದೆ ಆರೋಪಿ ಅತ್ಯಾಚಾರವೆಸಗಿದ್ದ. ಆದರೂ ಯುವತಿ ಮಾನಕ್ಕೆ ಅಂಜಿ ಯಾರ ಬಳಿಯೂ ಘಟನೆ ಬಗ್ಗೆ ಬಾಯ್ಬಿಟ್ಟಿರಲಿಲ್ಲ. ಆದರೆ ಆಕೆ ಗರ್ಭಿಣಿ ಎಂದು ತಿಳಿದಾಗ ವಿಚಾರ ಬಯಲಿಗೆ ಬಂದಿತ್ತು.
ಬಳಿಕ ಗ್ರಾಮದ ಮುಖಂಡರು ಆರೋಪಿಯೇ ಯುವತಿಯನ್ನು ಮದುವೆಯಾಗಬೇಕೆಂದು ನ್ಯಾಯ ಪಂಚಾಯ್ತಿ ನಡೆಸಿ ತೀರ್ಪು ನೀಡಿದ್ದರು. ಅದರಂತೆ ಆರೋಪಿ ಯುವತಿಯನ್ನು ಮನೆಗೆ ಕರೆದೊಯ್ದಿದ್ದ. ಆದರೆ ಬಳಿಕ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಿದ್ದಾನೆ. ಈ ಸಂಬಂಧ ಇದೀಗ ಯುವತಿಯ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ.