Select Your Language

Notifications

webdunia
webdunia
webdunia
webdunia

ಪತಿ ಜತೆ ಐಸಿಸ್ ಸೇರಿದ ಗರ್ಭಿಣಿ ಮಹಿಳೆ

ಪತಿ ಜತೆ ಐಸಿಸ್ ಸೇರಿದ ಗರ್ಭಿಣಿ ಮಹಿಳೆ
ತಿರುವನಂತಪುರಮ್ , ಸೋಮವಾರ, 11 ಜುಲೈ 2016 (16:09 IST)
ನೆರೆಯ ರಾಜ್ಯ ಕೇರಳದಿಂದ ಇತ್ತೀಚಿಗೆ 17 ಜನ ನಾಪತ್ತೆಯಾಗಿದ್ದು, ಅವರೆಲ್ಲ ಅಪಾಯಕಾರಿ ಉಗ್ರ ಸಂಘಟನೆ ಐಸಿಸ್ ಸೇರಿದ್ದಾರೆಂಬ ಶಂಕೆ ವ್ಯಕ್ತವಾಗಿದೆ. ಅದರಲ್ಲಿ ಒಬ್ಬ ಗರ್ಭಿಣಿಯೂ ಇದ್ದು ಆಕೆ ಮೂಲತಃ ಹಿಂದೂ ಧರ್ಮದವಳಾಗಿದ್ದು ಕ್ರಿಶ್ಚಿಯನ್ ಯುವಕನನ್ನು ಪ್ರೀತಿಸಿ ಮದುವೆಯಾಗಿ ಬಳಿಕ ಇಬ್ಬರು ಮುಸ್ಲಿಂ ಧರ್ಮಕ್ಕೆ ಮತಾಂತರವಾಗಿದ್ದಾಳೆಂದು ಹೇಳಲಾಗುತ್ತಿದೆ. ತನ್ನ ಮಗಳು ನಾಪತ್ತೆಯಾಗಿದ್ದಾಳೆಂದು ಆಕೆಯ ಇಂದು ಕೇರಳ ಸಿಎಂ ಪಿನರಾಯಿ ವಿಜಯನ್ ಅವರನ್ನು ಭೇಟಿಯಾಗಿ ಈ ಕುರಿತು ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ. 
 
ತನಿಖೆ ಪ್ರಗತಿಯಲ್ಲಿದೆ ಎಂದು ಸಿಎಂ ಭರವಸೆ ನೀಡಿದ್ದಾರೆ ಎಂದು ನಾಪತ್ತೆಯಾಗಿರುವ 25 ವರ್ಷದ ಮಹಿಳೆ ನಿಮಿಷಾಳ ತಾಯಿ ಬಿಂದು ಹೇಳಿದ್ದಾರೆ. 
 
ತನ್ನ ಮಗಳು ನಿಮಿಷಾ ಕಾರಸಗೋಡಿನಲ್ಲಿ ಅಂತಿಮ ವರ್ಷದ ದಂತ ವೈದ್ಯಕೀಯ ಶಿಕ್ಷಣವನ್ನು ಓದುತ್ತಿದ್ದಳು. ಆಕೆ ಕ್ರಿಶ್ಚಿಯನ್ ಯುವಕ ಬೆಕ್ಸಿನ್(32) ಎಂಬಾತನನ್ನು ಪ್ರೀತಿಸಿ ಮದುವೆಯಾಗಿದ್ದು ಬಳಿಕ ಅವರಿಬ್ಬರು ಮುಸ್ಲಿಂ ಧರ್ಮಕ್ಕೆ ಮತಾಂತರ ಹೊಂದಿದ್ದರು. 
 
ಮೇ 16 ರಂದು ಪತಿ ಜತೆ ನಮ್ಮ ಮನೆಗೆ ಬಂದಿದ್ದ ಬಿಂದು ಹಾಗೆಯೇ ಹಿಂತಿರುಗಿದ್ದಳು. ಮೇ 18 ರಂದು ವಾಣಿಜ್ಯ ಉದ್ದೇಶಕ್ಕಾಗಿ ಪತಿ ಜತೆಗೆ ಶ್ರೀಲಂಕಾ ಹೋಗುತ್ತೇನೆ ಎಂದು ಕರೆ ಮಾಡಿದ್ದ ಆಕೆ ತಾನು ಎಲ್ಲಿದ್ದೇನೆ ಎಂದು ಮಾತ್ರ ಬಾಯ್ಬಿಟ್ಟಿರಲಿಲ್ಲ. 
 
ಜೂನ್ 4 ರವರೆಗೆ ಆಕೆಯಿಂದ ನನಗೆ ಮೊಬೈಲ್ ಸಂದೇಶಗಳು ಬರುತ್ತಿದ್ದವು. ಆದರೆ ಆ ಬಳಿಕ ಅದು ನಿಂತು ಹೋಯಿತು. ಆಕೆ ಎಲ್ಲಿದ್ದಾಳೆ ಗೊತ್ತಿಲ್ಲ. ಆಕೆ ಮೊದಲು ಬೆಕ್ಸಿನ್‌ನನ್ನು ಭೇಟಿಯಾಗಿದ್ದು ಹೇಗೆ ಎಂಬುದು ಸಹ ನಮಗೆ ತಿಳಿದಿಲ್ಲ ಎಂದು ನೊಂದ ತಾಯಿ ಬಿಂದು ಹೇಳಿದ್ದಾಳೆ. 

Share this Story:

Follow Webdunia kannada

ಮುಂದಿನ ಸುದ್ದಿ

ರಾಜಕೀಯ ಕಾರಣಗಳಿಂದಾಗಿ ವಿಪಕ್ಷಗಳ ಪ್ರತಿಭಟನೆ: ಸಿಎಂ ತಿರುಗೇಟು