Publish Date: Fri, 17 Mar 2023 (18:52 IST)
Updated Date: Fri, 17 Mar 2023 (19:07 IST)
ಗುಜರಾತ್ನಲ್ಲಿ ಖದೀಮನೊಬ್ಬ ತಾನು ಪ್ರಧಾನ ಮಂತ್ರಿ ಸಚಿವಾಲಯದ ಹಿರಿಯ ಅಧಿಕಾರಿ ಎಂದು ಸುಳ್ಳು ಹೇಳಿ ಜಮ್ಮು-ಕಾಶ್ಮೀರದ ಆಡಳಿತಾಧಿಕಾರಿಗಳನ್ನೇ ವಂಚಿಸಿದ ಘಟನೆ ನಡೆದಿದೆ. ಗುಜರಾತ್ನ ಕಿರಣ್ ಭಾಯಿ ಪಟೇಲ್ ಎಂಬಾತ ಜಮ್ಮು ಕಾಶ್ಮೀರಕ್ಕೆ ಭೇಟಿ ನೀಡಿ, ತಾನು ಪ್ರಧಾನಮಂತ್ರಿ ಸಚಿವಾಲಯದ ಹಿರಿಯ ಅಧಿಕಾರಿಯಾಗಿದ್ದೇನೆಂದು ಹೇಳಿದ್ದ..ಅದಕ್ಕಾಗಿ ಜಮ್ಮು ಕಾಶ್ಮೀರದ ಅಧಿಕಾರಿಗಳು ಝಡ್ ಪ್ಲಸ್ ಭದ್ರತೆ ನೀಡಿ ಭೇಟಿ ನೀಡಿದ್ದರು. ಈ ಘಟನೆ 2023ರ ಜನವರಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಶ್ರೀ ನಗರಕ್ಕೆ ಭೇಟಿ ನೀಡಿದ್ದ ಪಟೇಲ್ ಜಮ್ಮು-ಕಾಶ್ಮೀರದ ಅಧಿಕಾರಿಗಳ ಜತೆ ಸರಣಿ ಸಭೆ ಕೂಡ ನಡೆಸಿ, ಚರ್ಚಿಸಿದ್ದ. ಪ್ರಧಾನ ಮಂತ್ರಿ ಕಚೇರಿಯ ಸ್ಟ್ರಾಟಜಿ ಮತ್ತು ಪ್ರಚಾರ ನಿರ್ವಹಣೆಯ ಹೆಚ್ಚುವರಿ ನಿರ್ದೇಶಕ ಎಂಬಂತೆ ಪೋಸು ಕೊಟ್ಟಿದ್ದ. ವಂಚಕ ಕಿರಣ್ ಭಾಯಿ ಪಟೇಲ್ನನ್ನು ಹತ್ತು ದಿನಗಳ ಹಿಂದಷ್ಟೇ ಬಂಧಿಸಿ, ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿತ್ತು, ಇದೀಗ ಆತ ಜೈಲಿನಲ್ಲಿ ಮದ್ದೆ ಮುರಿಯುತ್ತಿದ್ದಾನೆ.