Select Your Language

Notifications

webdunia
webdunia
webdunia
webdunia

ಮತ್ತೆ ಉಗ್ರ ಅಟ್ಟಹಾಸ; ಪೊಲೀಸ್ ಸಾವು

ಮತ್ತೆ ಉಗ್ರ ಅಟ್ಟಹಾಸ; ಪೊಲೀಸ್ ಸಾವು
ಶ್ರೀನಗರ , ಶನಿವಾರ, 8 ಅಕ್ಟೋಬರ್ 2016 (08:35 IST)
ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಇತ್ತೀಚಿಗೆ ಭಾರತೀಯ ಸೈನ್ಯ ಸೀಮಿತ ದಾಳಿ ನಡೆಸಿ ತಕ್ಕ ಶಾಸ್ತಿ ಮಾಡಿದರೂ ಪಾಠ ಕಲಿಯದ ಉಗ್ರರು ಮತ್ತೆ ಮತ್ತೆ ಗಡಿಯಲ್ಲಿ ಅಟ್ಟಹಾಸ ಮೆರೆಯುತ್ತಿದ್ದಾರೆ. ಶುಕ್ರವಾರ ರಾತ್ರಿ ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿನ ಭದ್ರತಾ ಠಾಣೆಯ ಮೇಲೆ ಗುಂಡಿನ ದಾಳಿ ನಡೆಸಿದ ಉಗ್ರರು ಒಬ್ಬ ಪೊಲೀಸನ ಸಾವಿಗೆ ಕಾರಣರಾಗಿದ್ದಾರೆ.

ಮೃತ ಪೊಲೀಸ್ ಪೇದೆಯನ್ನು ನಜೀರ್ ಅಹ್ಮದ್ ಎಂದು ಗುರುತಿಸಲಾಗಿದ್ದು ಮತ್ತೊಬ್ಬ ಪೇದೆ ಜಹೂರ್ ಅಹ್ಮದ್ ಮತ್ತು ಒರ್ವ ಸ್ಥಳೀಯ ನಾಗರಿಕ ಗಾಯಗೊಂಡಿದ್ದಾರೆ. 
 
ಪೊಲೀಸರು ದಾಳಿಗೆ ಪ್ರತಿದಾಳಿ ನಡೆಸಲು ಆರಂಭಿಸಿದಾಗ ಉಗ್ರರು ಅಲ್ಲಿಂದ ಕಾಲ್ಕಿತ್ತರು ಎಂದು ತಿಳಿದು ಬಂದಿದೆ.
 
ಪರಾರಿಯಾಗಿರುವ ಉಗ್ರರಿಗಾಗಿ ಶೋಧ ಕಾರ್ಯ ಆರಂಭವಾಗಿದ್ದು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಯಥಾವತ್ ವರದಿ ನೀಡುವಂತೆ ಕೇಂದ್ರ ತಾಂತ್ರಿಕ ತಜ್ಞರ ಬಳಿ ಜಿ.ಮಾದೇಗೌಡ ಮನವಿ