Select Your Language

Notifications

webdunia
webdunia
webdunia
webdunia

ಪೊಲೀಸ್ ಆತ್ಮಹತ್ಯೆ: ತಮಿಳುನಾಡಿನಲ್ಲಿ ಹೆಚ್ಚು

ಪೊಲೀಸ್ ಆತ್ಮಹತ್ಯೆ: ತಮಿಳುನಾಡಿನಲ್ಲಿ ಹೆಚ್ಚು
ನವದೆಹಲಿ , ಶನಿವಾರ, 6 ಆಗಸ್ಟ್ 2016 (07:26 IST)
ಇತರ ರಾಜ್ಯಗಳಿಗೆ ಹೋಲಿಸಿದರೆ ತಮಿಳುನಾಡಿನಲ್ಲಿ ಪೊಲೀಸರ ಆತ್ಮಹತ್ಯೆ ಸಂಖ್ಯೆ ಹೆಚ್ಚಿದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

ಕರ್ನಾಟಕದ ಸಂಸದ ನಳಿನ್ ಕುಮಾರ್ ಅವರು ಲೋಕಸಭಾ ಅಧಿವೇಶನದಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸುತ್ತಿದ್ದ ಅವರು ದೇಶದಲ್ಲಿ 2012ರಿಂದ 2014ರ ಅವಧಿಯಲ್ಲಿ  614 ಮಂದಿ ಆತ್ಮಹತ್ಯೆಗೆ ಶರಣಾಗಿದ್ದಾರೆ. 2012ರಲ್ಲಿ 214 ಮಂದಿ, 2013ರಲ್ಲಿ 235 ಮಂದಿ ಹಾಗೂ 2014ರಲ್ಲಿ 165 ಮಂದಿ ಪೊಲೀಸರು ಸಾವಿಗೆ ಶರಣಾಗಿದ್ದಾರೆ. ಅದರಲ್ಲಿ ಅತ್ಯಧಿಕ ಎಂದರೆ ತಮಿಳುನಾಡಿನಲ್ಲಿ. ಈ ಅವಧಿಯಲ್ಲಿ ಅಲ್ಲಿ 116 ಪೊಲೀಸರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಹಾರಾಷ್ಟ್ರ(104) ಎರಡನೇ ಸ್ಥಾನದಲ್ಲಿದೆ ಎಂದು ಅವರು ಹೇಳಿದ್ದಾರೆ. ಕರ್ನಾಟಕದ ಮಟ್ಟಿಗೆ ಹೇಳುವುದಾದರೆ ಈ ಸಂಖ್ಯೆ 39 ಇದೆ. ಉತ್ತರಾಖಂಡದಲ್ಲಿ ಮಾತ್ರ ಈ ಮೂರು ವರ್ಷಗಳಲ್ಲಿ ಪೊಲೀಸ್ ಆತ್ಮಹತ್ಯೆ ನಡೆದಿಲ್ಲ.

ಕೇಂದ್ರ ಅಪರಾಧ ದಾಖಲೆಗಳ ಬ್ಯೂರೊ ಅಂಕಿ ಅಂಶಗಳ ಆಧಾರದಲ್ಲಿ ಈ ಮಾಹಿತಿ ನೀಡಲಾಗಿದ್ದು ಅಧ್ಯಯನಗಳ ಪ್ರಕಾರ ಕೆಲಸದ ಒತ್ತಡವೇ ಆತ್ಮಹತ್ಯಗೆ ಪ್ರಬಲ ಕಾರಣವಾಗಿದೆ. ವೈಯಕ್ತಿಕ  ಸಮಸ್ಯೆಗಳು ಮತ್ತು ಅನಾರೋಗ್ಯ ರಕ್ಷಕರ ಆತ್ಮಹತ್ಯೆಗೆ ಇತರ ಕಾರಣಗಳೆಂದು ಅಧ್ಯಯನದಲ್ಲಿ ಸಾಬೀತಾಗಿದೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಬ್ಯಾಂಕ್ ಆಫ್ ಇಂಗ್ಲೆಂಡ್ ರೆಪೋ ಕಡಿತ: ಗಗನಕ್ಕೇರಿದ ಶೇರುಪೇಟೆ ಸೂಚ್ಯಂಕ