Select Your Language

Notifications

webdunia
webdunia
webdunia
webdunia

ಹಾಡಹಗಲೇ ಪೊಲೀಸ್ ಅಧಿಕಾರಿ ಪತ್ನಿ, ಪುತ್ರಿಯ ಮೇಲೆ ಭೀಕರ ಹಲ್ಲೆ

ಹಾಡಹಗಲೇ ಪೊಲೀಸ್ ಅಧಿಕಾರಿ ಪತ್ನಿ, ಪುತ್ರಿಯ ಮೇಲೆ ಭೀಕರ ಹಲ್ಲೆ
ಶ್ರೀನಗರ್ , ಮಂಗಳವಾರ, 12 ಜುಲೈ 2016 (20:35 IST)
ದಕ್ಷಿಣ ಕಾಶ್ಮಿರದ ಪುಲ್ವಾಮಾ ಜಿಲ್ಲೆಯ ಅವಂಟಿಪೋರಾ ಪ್ರದೇಶದಲ್ಲಿ ಪೊಲೀಸ್ ಅಧಿಕಾರಿಯೊಬ್ಬರ ಪತ್ನಿ ಮತ್ತು ಪುತ್ರಿಯನ್ನು ಕೆಲ ಕಿಡಿಗೇಡಿಗಳ ಗುಂಪು ಮನಬಂದಂತೆ ಥಳಿಸಿದ ಹೇಯ ಘಟನೆ ವರದಿಯಾಗಿದೆ.
 
ಹಿಜ್ಬುಲ್ ಕಮಾಂಡರ್ ಉಗ್ರ ಬುರ್ಹಾನ್ ವನಿ ಹತ್ಯೆಯನ್ನು ವಿರೋಧಿಸಿ ಪ್ರತಿಭಟನೆಯಲ್ಲಿ ತೊಡಗಿರುವ ಪ್ರತಿಭಟನಕಾರಾರು ಹಿಂಸಾಚಾರವನ್ನು ಮುಂದುವರಿಸಿದ್ದಾರೆ.
 
ಪೊಲೀಸ್ ಅಧಿಕಾರಿ ಮೊಹಮ್ಮದ್ ಅಶ್ರಫ್ ಪಾಲ್ ಅವರ ನಿವಾಸಕ್ಕೆ ನುಗ್ಗಿದ ಪ್ರತಿಭಟನಾಕಾರರು ಅವರ ಪತ್ನಿ ಮತ್ತು ಪುತ್ರಿಯ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. 
 
ಗಂಭೀರವಾಗಿ ಗಾಯಗೊಂಡ ಇಬ್ಬರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
 
ಕಿಡಿಗೇಡಿಗಳ ಗುಂಪು ಮನೆಯ ಮೇಲೆ ದಾಳಿ ನಡೆಸಿದಾಗ ಅಶ್ರಫ್ ಅನಂತ್‌ನಾಗ್ ಜಿಲ್ಲೆಯ ಬಿಬ್‌ಜೆಹರಾ ಪ್ರದೇಶದಲ್ಲಿ ಕರ್ತವ್ಯನಿರ್ವಹಿಸುತ್ತಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಉತ್ತರಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ ಸಂಸದ ರಾಜ್ ಬಬ್ಬರ್