Select Your Language

Notifications

webdunia
webdunia
webdunia
webdunia

ಹಣದ ದಾಹಕ್ಕೆ ಮಡದಿಯನ್ನೇ ಮಾರಿದ ಪಾಪಿ ಪತಿರಾಯ

ಹಣದ ದಾಹಕ್ಕೆ ಮಡದಿಯನ್ನೇ ಮಾರಿದ ಪಾಪಿ ಪತಿರಾಯ
ಗ್ವಾಲಿಯಾರ್‌ , ಶುಕ್ರವಾರ, 20 ಮೇ 2016 (10:45 IST)
ಹಣದ ದಾಹಕ್ಕಾಗಿ ಪಾಪಿ ಪತಿಯೋರ್ವ ತನ್ನ ಮಡದಿಯನ್ನೇ ಮಾರಾಟ ಮಾಡಿದ ಹೇಯ ಕೃತ್ಯ ಮಧ್ಯಪ್ರದೇಶದ ಗ್ವಾಲಿಯರ್‌‌ನಲ್ಲಿ ನಡೆದಿದೆ.
ಪಾಪಿ ಪತಿರಾವ ತನ್ನ ಹಣದ ದಾಹಕ್ಕೆ ಕೇವಲ 72 ಸಾವಿರ ರೂಪಾಯಿಗಳಿಗೆ ಡಾತಿಯಾ ಪ್ರದೇಶದ ಯುವಕನಿಗೆ ತನ್ನ ಮಡದಿಯನ್ನು ಮಾರಾಟ ಮಾಡಿದ್ದಾನೆ. ಈ ನೀಚ ಪತಿ ಪ್ರತಿನಿತ್ಯ ತನ್ನ ಮಡದಿಯ ಮೇಲೆ ಅನುಮಾನ ಪಡುತ್ತಿದ್ದು, ಈ ವಿಷಯವಾಗಿ ಇಬ್ಬರ ಮಧ್ಯ ಗಲಾಟೆ ನಡೆಯುತ್ತಿತ್ತು ಎಂದು ಮೂಲಗಳು ತಿಳಿಸಿವೆ.
 
ಅಚಾನಕ್ಕಾಗಿ ಈ ದಂಪತಿಯ ಮಗಳಿಗೆ ಗಾಯವಾಗಿದ್ದು, ಆಸ್ಪತ್ರೆಗಾಗಿ ಕಮಲರಾಜ್‌ ಆಸ್ಪತ್ರೆಗೆ ಸೇರಿಸಿದ್ದರು. ಇದೆ ಸಂದರ್ಭದಲ್ಲಿ ನೀಚ ಪತಿ ತನ್ನ ಇಬ್ಬರು ಗೆಳೆಯರೊಂದಿಗೆ ಸೇರಿ ತಂಪು ಪಾನೀಯಾದಲ್ಲಿ ಮದ್ದು ಬರುವ ಮಾತ್ರೆ ಹಾಕಿ ಮಡದಿಗೆ ನೀಡಿದ್ದಾನೆ. ಪಾನೀಯಾ ಕುಡಿದ ಮಹಿಳೆ ಪ್ರಜ್ಞೆ ತಪ್ಪಿದ್ದು, ಆಕೆ ಕಣ್ಣು ಬಿಡುವಷ್ಟರಲ್ಲಿ ಪಾಪಿ ಪತಿರಾಯ ಆಕೆಯನ್ನು ಮಾರಾಟ ಮಾಡಿದ್ದು, ತಾನೇ ಕುದ್ದಾಗಿ ಪೊಲೀಸ್ ಠಾಣೆಗೆ ತೆರಳಿ ತನ್ನ ಮಡದಿ ಕಾಣೆಯಾಗಿದ್ದಾಳೆ ಎಂದು ದೂರು ನೀಡಿದ್ದ ಎಂದು ಪೊಲೀಸ್ ಮಾಹಿತಿಗಳು ತಿಳಿಸಿವೆ.
 
ಈ ಕುರಿತು ದೂರು ದಾಖಲಿಸಿಕೊಂಡ ಪೊಲೀಸರು, ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.

Share this Story:

Follow Webdunia kannada

ಮುಂದಿನ ಸುದ್ದಿ

ಚುನಾವಣೆಯಲ್ಲಿ ಪ್ರಾಂತ್ಯೀಯ ಪಕ್ಷಗಳ ಪ್ರಾಬಲ್ಯ: ದೇವೇಗೌಡ