Webdunia - Bharat's app for daily news and videos

Install App

ಪಿಎಂ ಉಜ್ವಲ್ ಯೋಜನೆ ಮೂಲಕ ಉಚಿತ ಗ್ಯಾಸ್ ಸಂಪರ್ಕಕ್ಕೆ ಅರ್ಜಿ ಸಲ್ಲಿಸಲು ಅವಕಾಶ: ಇಲ್ಲಿದೆ ಡಿಟೈಲ್ಸ್

Krishnaveni K
ಗುರುವಾರ, 19 ಡಿಸೆಂಬರ್ 2024 (08:57 IST)
ನವದೆಹಲಿ: ಪ್ರಧಾನ ಮಂತ್ರಿ ಉಜ್ವಲ್ ಯೋಜನೆಯಡಿ ಉಚಿತ ಗ್ಯಾಸ್ ಸಂಪರ್ಕ ಪಡೆಯಲು ಮತ್ತೊಂದು ಅವಕಾಶ ನೀಡಲಾಗಿದೆ. ಉಜ್ವಲ್ ಯೋಜನೆ 2.0 ಕ್ಕೆ ಅರ್ಜಿ ಸಲ್ಲಿಸಲು ಯಾರು ಅರ್ಹರು, ಹೇಗೆ ಸಲ್ಲಿಕೆ ಮಾಡಬೇಕು ಇಲ್ಲಿದೆ ವಿವರ.

ಮೊದಲ ಹಂತದಲ್ಲಿ ಬಡತನ ರೇಖೆಗಿಂತ ಕೆಳಗಿರುವ ಸುಮಾರು 5 ಕೋಟಿ ಮಹಿಳಾ ಸದಸ್ಯರು ಉಜ್ವಲ್ ಯೋಜನೆಯಡಿ ಉಚಿತ ಗ್ಯಾಸ್ ಸಂಪರ್ಕ ಪಡೆದುಕೊಂಡಿದ್ದರು. ಇದೀಗ ಈ ಯೋಜನೆಯನ್ನು ವಿಸ್ತರಿಸಲಾಗಿದೆ. ಈ ಬಾರಿ ಯಾರೆಲ್ಲಾ ಯೋಜನೆಗೆ ಅರ್ಜಿ ಸಲ್ಲಿಸಬಹುದು ಇಲ್ಲಿದೆ ವಿವರ.

ಅರ್ಜಿ ಸಲ್ಲಿಸಲು ಅರ್ಹತೆ
ಭಾರತೀಯ ಮಹಿಳಾ ಪ್ರಜೆಯಾಗಿರಬೇಕು
ಈಗಾಗಲೇ ಇತರೆ ಎಲ್ ಪಿಜಿ ಸಂಪರ್ಕ ಹೊಂದಿರಬಾರದು
18 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರಾಗಿರಬೇಕು
ಬಿಪಿಎಲ್ ಕಾರ್ಡ್ ದಾರರಾಗಿರಬೇಕು
ಪರಿಶಿಷ್ಟ ಜಾತಿ/ಪಂಗಡದ ಮಹಿಳೆಯರು ಅರ್ಹರು
ಆರ್ಥಿಕವಾಗಿ ಹಿಂದುಳಿದ ವರ್ಗದವರು ಅರ್ಹರು
ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಫಲಾನುಭವಿಗಳೂ ಅರ್ಹರು

ಏನೆಲ್ಲಾ ದಾಖಲೆಗಳು ಬೇಕು
ಆಧಾರ್ ಕಾರ್ಡ್
ಪಡಿತರ ಚೀಟಿ
ಬ್ಯಾಂಕ್ ಪಾಸ್ ಬುಕ್
ಮೊಬೈಲ್ ನಂಬರ್
ವಾಸಸ್ಥಳ ದೃಢೀಕರಣ
ಪಾಸ್ ಪೋರ್ಟ್ ಸೈಝ್ ಫೋಟೋ

ಅರ್ಜಿ ಸಲ್ಲಿಸುವುದು ಹೇಗೆ
ಆನ್ ಲೈನ್ ಮೂಲಕ  https://pmuy.gov.in/  ಎಂಬ ವೆಬ್ ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.ಇಲ್ಲಿ ಕೇಳುವ ಮಾಹಿತಿಗಳನ್ನು ನೀಡಿ ಅಗತ್ಯವಿರುವ ದಾಖಲೆಗಳ ಸ್ಕ್ಯಾನ್ ಕಾಪಿಯನ್ನು ಅಪ್ ಲೋಡ್ ಮಾಡಬೇಕು. ಇದಲ್ಲದೇ ಹೋದರೆ ಎಲ್ ಪಿಜಿ ತುರ್ತು ಸಹಾಯವಾಣಿ ನಂಬರ್ 1906 ಕ್ಕೆ ಕರೆ ಮಾಡಿ ಹೆಚ್ಚಿನ ಮಾಹಿತಿ ಪಡೆಯಬಹುದು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮಿಡಿಗೇಶಿ ಬಳಿ 19 ನವಿಲುಗಳ ಸಾವು: ಎಚ್ಚೆತ್ತ ಸರ್ಕಾರದಿಂದ ದಿಟ್ಟ ನಿರ್ಧಾರ

ಟೆಸ್ಟ್‌ನಲ್ಲಿ ತುಂಬಾ ಮಿಸ್ ಮಾಡಿಕೊಂಡಿದ್ದೇನೆ, ವಿರಾಟ್‌ ದೇಶಕ್ಕೆ ನಿಮ್ಮ ಅವಶ್ಯಕತೆಯಿದೆ: ಶಶಿ ತರೂರ್ ಪೋಸ್ಟ್‌

ನೇಹಾ ಹಿರೇಮಠ ಹತ್ಯೆ ಸಂಬಂಧ: ಆರೋಪಿಗೆ ಫಯಾಜ್ ಬಿಗ್ ಶಾಕ್

ಧರ್ಮಸ್ಥಳ ಅಸ್ಥಿ ಉತ್ಖನನ: ದೂರುದಾರ ಗುರುತಿಸಿದ 11ನೇ ಪಾಯಿಂಟ್‌ನಲ್ಲಿ ಬಿಗ್‌ಟ್ವಿಸ್ಟ್‌

ಮೈಸೂರಿನತ್ತ ಹೆಜ್ಜೆ ಹಾಕಿದ ಅಭಿಮನ್ಯ ನೇತೃತ್ವದ 9 ಗಜಪಡೆ

ಮುಂದಿನ ಸುದ್ದಿ
Show comments