Webdunia - Bharat's app for daily news and videos

Install App

ಜನತೆಯಿಂದ ಶಿಕ್ಷೆ ಅನುಭವಿಸಲು ಮೋದಿ ಸ್ಥಳ ಆಯ್ಕೆ ಮಾಡಲಿ: ಲಾಲು ಯಾದವ್

Webdunia
ಸೋಮವಾರ, 26 ಡಿಸೆಂಬರ್ 2016 (18:52 IST)
ನೋಟು ನಿಷೇಧ ಜಾರಿಗೊಳಿಸಿದ 50 ದಿನಗಳ ನಂತರ ಹಣಕಾಸಿನ ಬಿಕ್ಕಟ್ಟು ಇತ್ಯರ್ಥವಾಗದಿದ್ದಲ್ಲಿ ದೇಶದ ಜನತೆ ಶಿಕ್ಷಿಸಬಹುದು ಎಂದು ಹೇಳಿಕೆ ನೀಡಿದ ಪ್ರಧಾನಿ ಮೋದಿ, ಶಿಕ್ಷೆಗೆ ಸಿದ್ದರಾಗಲು ಯಾವುದಾದರೊಂದು ವೃತ್ತವನ್ನು ಹುಡುಕಿದಲ್ಲಿ ಜನತೆ ಶಿಕ್ಷಿಸಲು ಸಿದ್ದರಾಗುತ್ತಾರೆ ಎಂದು ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಹೇಳಿದ್ದಾರೆ.
 
ಕಪ್ಪು ಹಣದ ವಿರುದ್ಧದ ಹೋರಾಟಕ್ಕಾಗಿ ನೋಟು ನಿಷೇಧ ಜಾರಿಗೊಳಿಸಿ ದೇಶದ ಆರ್ಥಿಕ ಸ್ಥಿತಿಯನ್ನು ಹದಗೆಡಿಸಿದ್ದಲ್ಲದೇ ಜನಸಾಮಾನ್ಯರಿಗೆ ಸಂಕಷ್ಟ ತಂದಿದ್ದಕ್ಕಾಗಿ, ಜನರು ಶಿಕ್ಷಿಸಲು ಪ್ರಧಾನಿ ಮೋದಿ ತಮಗೆ ಇಷ್ಟವಾದ ಸ್ಥಳವನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.
 
ಗೋವಾದಲ್ಲಿ ಪ್ರಧಾನಿ ಮೋದಿ ಕಪ್ಪು ಹಣದ ವಿರುದ್ಧದ ಹೋರಾಟಕ್ಕಾಗಿ 1000 ಮತ್ತು 500 ರೂ. ನೋಟು ನಿಷೇಧ ಹೇರಲಾಗಿದ್ದು, ನನಗೆ 50 ದಿನಗಳ ಕಾಲವಕಾಶ ಕೊಡಿ ಎಂದು ಜನತೆಯನ್ನು ಕೋರಿದ್ದರು.  
 
ನೋಟು ನಿಷೇಧದ ನಂತರ ನಗದು ರಹಿತ ಆರ್ಥಿಕತೆಯ ಬಗ್ಗೆ ಹೇಳುತ್ತಿರುವ ಹೇಳಿಕೆಗಳನ್ನು ನೋಡಿದಲ್ಲಿ ಕೋತಿಯಾಟದಂತೆ ಕಾಣುತ್ತದೆ ಎಂದು ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
 
ಪ್ರಧಾನಿ ಮೋದಿಯ ಸಾರ್ವಜನಿಕ ಸಭೆಗಳಲ್ಲಿ ಕೆಲ ಆರೆಸ್ಸೆಸ್ ಕಾರ್ಯಕರ್ತರು ಮುಂದಿನ ಸೀಟುಗಳಲ್ಲಿ ಆಸೀನರಾಗಿ ಮೋದಿ ಮೋದಿ ಎಂದು ಕೂಗುತ್ತಿರುತ್ತಾರೆ. ಆದರೆ, ಮೋದಿ ಅದನ್ನು ಸಾರ್ವಜನಿಕರು ನನ್ನನ್ನು ಹೊಗಳುತ್ತಿದ್ದಾರೆ ಎಂದು ಹೇಳುತ್ತಾ ತಿರುಗುತ್ತಿದ್ದಾರೆ ಎಂದು ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ವ್ಯಂಗ್ಯವಾಡಿದ್ದಾರೆ. 

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments