Webdunia - Bharat's app for daily news and videos

Install App

ಹೈಪ್ರೋಫೈಲ್ ಸೆಕ್ಸ್ ರಾಕೆಟ್: ನಟಿಯರು, ಮಾಡೆಲ್‌ಗಳಿಂದ ಸೆಕ್ಸ್ ಸೇವೆ ಬಹಿರಂಗ

Webdunia
ಸೋಮವಾರ, 26 ಡಿಸೆಂಬರ್ 2016 (17:17 IST)
ಸೆಕ್ಸ್ ರಾಕೆಟ್ ನಡೆಸುತ್ತಿದ್ದವರ ಕಪಿಮುಷ್ಟಿಯಿಂದ ತಪ್ಪಿಸಿಕೊಂಡು ಬಂದ ಇಬ್ಬರು ಯುವತಿಯರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಮಲೆಯಾಳಿ ಯುವಕರು ಸೆಕ್ಸ್ ರಾಕೆಟ್ ನಡೆಸುತ್ತಿದ್ದಾರೆ ಎಂದು ದೂರಿದ್ದಾರೆ.
  
ಸೆಕ್ಸ್ ರಾಕೆಟ್ ಜಾಲದಲ್ಲಿ ಹೈಪ್ರೋಫೈಲ್ ನಟಿಯರು ಸೇರಿದಂತೆ, ಮಾಡೆಲ್‌ಗಳು ಕೂಡಾ ವೃತ್ತಿ ನಿರತರಾಗಿದ್ದಾರೆ. ಗ್ರಾಹಕರೊಂದಿಗೆ ಸೆಕ್ಸ್ ನಡೆಸುತ್ತಿರುವ ದೃಶ್ಯಗಳ ವಿಡಿಯೋ ಮಾಡಿಕೊಂಡು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. 
 
ತಿರುವನಂತಪುರಂ ಜಿಲ್ಲೆಯ ಕನಿಯಾಪುರಂ ಮೂಲದ ನಿವಾಸಿಯಾದ ಶಾನವಾಸ್ ಎನ್ನುವ ವ್ಯಕ್ತಿ ಸೆಕ್ಸ್ ರಾಕೆಟ್ ಕಿಂಗ್‌ಪಿನ್ ಆಗಿದ್ದಾನೆ. ಹಲವಾರು ವಿದೇಶಿ ಮಹಿಳೆಯರು ಕೂಡಾ ಸೆಕ್ಸ್ ರಾಕೆಟ್‌ ಜಾಲಕ್ಕೆ ಸಿಲುಕಿದ್ದಾರೆ. ಶಾರ್ಜಾದಲ್ಲಿ ಸರಕಾರಿ ಸೇವೆಯಲ್ಲಿರುವ ಯುವತಿಗೆ ವಿವಾಹವಾಗುವುದಾಗಿ ನಂಬಿಸಿ ಸೆಕ್ಸ್ ರಾಕೆಟ್ ಜಾಲಕ್ಕೆ ನೂಕಿದ್ದಾನೆ ಎನ್ನಲಾಗಿದೆ.  
 
ಈಗಾಗಲೇ ನೂರಕ್ಕೂ ಹೆಚ್ಚು ಯುವತಿಯರಿಗೆ ವಿವಾಹವಾಗುವುದಾಗಿ ನಂಬಿಸಿ ನಂತರ ಅವರನ್ನು ವೇಶ್ಯಾವಾಟಿಕೆಗೆ ತಳ್ಳುತ್ತಿದ್ದ ಎಂದು ಯುವತಿಯರು ಆರೋಪಿಸಿದ್ದಾರೆ. ಪೊಲೀಸರು ಆರೋಪಿ ಶಾನವಾಸ್ ಬಂಧನಕ್ಕೆ ಜಾಲ ಬೀಸಿದ್ದು, ಶೀಘ್ರದಲ್ಲಿ ಬಂಧಿಸುವ ವಿಶ್ವಾಸವಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ