Select Your Language

Notifications

webdunia
webdunia
webdunia
webdunia

ಪ್ರಧಾನಿ ಮೋದಿ ಮಹಿಳೆಯರನ್ನು ಗೌರವಿಸಬೇಕು ಎಂದು ಹೇಳ್ತಾರೆ, ಆದ್ರೆ, ಪತ್ನಿಯನ್ನೇ ಮನೆಗೆ ಕರೆತರುತ್ತಿಲ್ಲ: ಆಜಂಖಾನ್

ಪ್ರಧಾನಿ ಮೋದಿ ಮಹಿಳೆಯರನ್ನು ಗೌರವಿಸಬೇಕು ಎಂದು ಹೇಳ್ತಾರೆ, ಆದ್ರೆ, ಪತ್ನಿಯನ್ನೇ ಮನೆಗೆ ಕರೆತರುತ್ತಿಲ್ಲ: ಆಜಂಖಾನ್
ರಾಮ್‌ಪುರ್ , ಶುಕ್ರವಾರ, 17 ಜೂನ್ 2016 (13:55 IST)
ಪ್ರಧಾನಮಂತ್ರಿ ನರೇಂದ್ರ ಮೋದಿ ಮಹಿಳೆಯರ ಗೌರವದ ಬಗ್ಗೆ ಮಾತನಾಡುತ್ತಾರೆ. ಆದರೆ, ತಮ್ಮ ಪತ್ನಿಯನ್ನೇ ಮನೆಗೆ ಕರೆತಲು ನಿರಾಕರಿಸುತ್ತಿದ್ದಾರೆ ಎಂದು ಉತ್ತರಪ್ರದೇಶದ ನಗರಾಭಿವೃದ್ಧಿ ಖಾತೆ ಸಚಿವ ಆಜಂ ಖಾನ್ ಹೇಳಿಕೆ ನೀಡಿ ಮತ್ತೊಂದು ವಿವಾದ ಸೃಷ್ಟಿಸಿದ್ದಾರೆ.
 
ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ಮುಂದುವರಿಸಿರುವ ಆಜಂಖಾನ್, ಮೋದಿ ತಮ್ಮ ತಾಯಿಯನ್ನು ಮನೆಗೆ ಕರೆಸಿಕೊಂಡಿದ್ದಾರೆ.. ಅದರಂತೆ , ಪತ್ನಿಯನ್ನು ಮನೆಗೆ ಕರೆಸಿಕೊಂಡಲ್ಲಿ ಅವರಿಗೆ ನಾವು ಧನ್ಯವಾದಗಳನ್ನು ಅರ್ಪಿಸುತ್ತೇವೆ ಎಂದು ಲೇವಡಿ ಮಾಡಿದ್ದಾರೆ.
 
ಮೋದಿ ನೇತೃತ್ವದ ಸರಕಾರ ಅಲ್ಪಸಂಖ್ಯಾತರನ್ನು ಪಾಕಿಸ್ತಾನಕ್ಕೆ ಕಳುಹಿಸಿಕೊಡುವುದಾಗಿ ಹೇಳುತ್ತದೆ. ಆದರೆ, ಭಾರತ ದೇಶಕ್ಕೆ ಯಾವುದೇ ಮಾಹಿತಿ ನೀಡದೆ ಇಸ್ಲಾಂ ರಾಷ್ಟ್ರವಾದ ಪಾಕಿಸ್ತಾನಕ್ಕೆ ತೆರಳಿ, ನವಾಜ್ ಷರೀಫ್ ಅವರ ತಾಯಿಯ ಪಾದ ಮುಟ್ಟಿ ನಮಸ್ಕರಿಸಿದ್ದಲ್ಲದೇ ಮುಚ್ಚಿದ ಕೋಣೆಯಲ್ಲಿ ಉಗ್ರರೊಂದಿಗೆ ಕೈಕುಲುಕುತ್ತಾರೆ ಎಂದು ವ್ಯಂಗ್ಯವಾಡಿದ್ದಾರೆ.  
 
ಉತ್ತರಪ್ರದೇಶದ ಕೈರಾನಾ ಜಿಲ್ಲೆಯ ವಿಷಯ ಕುರಿತು ಪ್ರಸ್ತಾಪಿಸಿದ ಸಮಾಜವಾದಿ ಪಕ್ಷದ ನಾಯಕ ಆಜಂಖಾನ್, ಉತ್ತರಪ್ರದೇಶದಲ್ಲಿ ಗುಜರಾತ್‌ನಂತೆ ದಂಗೆ ಮಾಡಲು ಬಿಜೆಪಿ, ಆರೆಸ್ಸೆಸ್ ಆದೇಶದ ಮೇರೆಗೆ ಸಂಚು ರೂಪಿಸುತ್ತಿದೆ ಎನ್ನುವ ಅನುಮಾನ ಕಾಡುತ್ತಿದೆ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.
 
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ
ಪ್ರಧಾನಿ ಮೋದಿ ಮಹಿಳೆಯರನ್ನು ಗೌರವಿಸಬೇಕು ಎಂದು ಹೇಳ್ತಾರೆ, ಆದ್ರೆ, ಪತ್ನಿಯನ್ನೇ ಮನೆಗೆ ಕರೆತರುತ್ತಿಲ್ಲ: ಆಜಂಖಾನ್

Share this Story:

Follow Webdunia kannada

ಮುಂದಿನ ಸುದ್ದಿ

ಸೋನಿಯಾ, ಸಿಎಂ ಸಿದ್ದರಾಮಯ್ಯ ಭೇಟಿ ನಂತ್ರ ಸಂಪುಟ ಪುನಾರಚನೆ: ಖರ್ಗೆ