ಇಂದು ಮಾಜಿ ರಾಷ್ಟ್ರಪತಿ, ವಿಜ್ಞಾನಿ, ಭಾರತ ರತ್ನ ಎ.ಪಿ.ಜೆ ಅಬ್ದುಲ್ ಕಲಾಂ ಅವರ 85ನೇ ಜನ್ಮದಿನವಾಗಿದ್ದು, ದೇಶದ ಹೆಮ್ಮೆಯ ಪುತ್ರನಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಗೌರವ ಸಮರ್ಪಿಸಿದ್ದಾರೆ.
ಪ್ರತಿಯೊಬ್ಬ ಭಾರತೀಯನನ್ನು ತಮ್ಮೆಡೆಗೆ ಸೆಳೆದಿದ್ದ ನಮ್ಮ ಮಾಜಿ ರಾಷ್ಟ್ರಪತಿ ಕಲಾಂ ಅವರಿಗೆ ಗೌರವ ಸಲ್ಲಿಸುತ್ತಿದ್ದೇನೆ, ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
ಅಬ್ದುಲ್ ಕಲಾಂ ಅವರು 2002ರ ಜುಲೈ 25ರಿಂದ 2007ರ ಜುಲೈ 25ರ ವರೆಗೂ ಭಾರತದ 11ನೇ ರಾಷ್ಟ್ರಪತಿಗಳಾಗಿದ್ದರು. 1997ರಲ್ಲಿ ಭಾರತ ಸರ್ಕಾರ ಕಲಾಂ ಅವರಿಗೆ ಭಾರತ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು.
ಮಿಸೈಲ್ ಮ್ಯಾನ್ ಆಫ್ ಇಂಡಿಯಾ (ಕ್ಷಿಪಣಿ ಜನಕ) ಎಂದು ಪ್ರಖ್ಯಾತರಾಗಿದ್ದ, ಕಲಾಂ ಪದ್ಮ ಭೂಷಣ(1981), ಪದ್ಮ ವಿಭೂಷಣ(1990), ಅತ್ಯುನ್ನತ ನಾಗರಿಕ ಪ್ರಶಸ್ತಿ ಭಾರತ ರತ್ನ(1997) ಸೇರಿದಂತೆ ಅನೇಕ ಪ್ರಶಸ್ತಿಗಳಿಂದ ಪುರಸ್ಕೃತರಾಗಿದ್ದರು. ಜುಲೈ 25 2002ರಿಂದ ಜುಲೈ 25, 2007ರವರೆಗೆ ದೇಶದ ರಾಷ್ಟ್ರಪತಿಯಾಗಿ ಸೇವೆಸಲ್ಲಿಸಿದ್ದರು.
ದೇಶ ಕಂಡ ರಾಷ್ಟ್ರಪತಿಗಳಲ್ಲಿ ಅತಿ ಹೆಚ್ಚಿನ ಜನಮನ್ನಣೆ ಗಳಿಸಿದ್ದ ಅವರು ಜನರ ರಾಷ್ಟ್ರಪತಿ ಎಂದೇ ಗುರುತಿಸಿಕೊಂಡಿದ್ದರು.
ಅಕ್ಟೋಬರ್ 15, 1931ರಲ್ಲಿ ತಮಿಳುನಾಡಿನ ರಾಮೇಶ್ವರಂನಲ್ಲಿ ಜನಿಸಿದ್ದ ಕಲಾಂ ಕಳೆದ ವರ್ಷ ಜುಲೈ 27 ರಂದು ಶಿಲ್ಲಾಂಗ್‌ನ ಐಐಎಮ್‌ನಲ್ಲಿ ಭಾಷಣ ಮಾಡುತ್ತಿದ್ದ ಸಂದರ್ಭದಲ್ಲಿ ಹೃದಯಾಘಾತಕ್ಕೊಳಗಾಗಿ ನಮ್ಮನ್ನು ಅಗಲಿದ್ದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ