Select Your Language

Notifications

webdunia
webdunia
webdunia
webdunia

ನವರಾತ್ರಿ ನಿಮಿತ್ತ ದೇಶವಾಸಿಗಳಿಗೆ ಪ್ರಧಾನಿ ಶುಭಾಶಯ

ನವರಾತ್ರಿ ನಿಮಿತ್ತ ದೇಶವಾಸಿಗಳಿಗೆ ಪ್ರಧಾನಿ ಶುಭಾಶಯ
ನವದೆಹಲಿ , ಶನಿವಾರ, 1 ಅಕ್ಟೋಬರ್ 2016 (12:01 IST)
ದೇಶಾದ್ಯಂತ ಇಂದಿನಿಂದ ನವರಾತ್ರಿ ಆಚರಣೆ ಆರಂಭವಾಗಿದ್ದು , ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ ಹಬ್ಬದ ಶುಭಾಶಯ ಕೋರಿದ್ದಾರೆ. 
ಮಂಗಳಕರ ನವರಾತ್ರಿ ಹಬ್ಬ ಆರಂಭವಾಗುತ್ತಿದ್ದು, ದೇಶದ ಸಮಸ್ತ ಜನತೆಗೆ ಶುಭಕಾಮನೆಗಳು ಎಂದು ಪ್ರಧಾನಿ ಮೋದಿ ಟ್ವೀಟ್ ಪ್ರಕಟಿಸಿದ್ದಾರೆ. 
 
ಶನಿವಾರ (ಅಕ್ಟೋಬರ್ 1) ರಿಂದ ನವರಾತ್ರಿ ಆರಂಭವಾಗುತ್ತಿದೆ. ಈ ಬಾರಿ ನವರಾತ್ರಿಯನ್ನು 10 ದಿನ ಆಚರಿಸಲಾಗುತ್ತಿದೆ. ಅಕ್ಟೋಬರ್ 11 ರಂದು ದಸರಾ ಆಚರಣೆಯೊಂದಿಗೆ ಹಬ್ಬ ಕೊನೆಗೊಳ್ಳುತ್ತದೆ. 
 
ಭಾರತೀಯರು ಅತ್ಯಂತ ಭಕ್ತಿ, ಶ್ರದ್ಧೆಗಳಿಂದ ನವರಾತ್ರಿಯನ್ನು ಆಚರಿಸುತ್ತಾರೆ. ಪ್ರಧಾನಿ ಮೋದಿ ಸಹ ಈ 9 ದಿನ ಉಪವಾಸವನ್ನು ಆಚರಿಸುತ್ತಾರೆ. ಈ ದಿನಗಳಲ್ಲಿ ಅವರು ಕೇವಲ ಹಣ್ಣು ಮತ್ತು ನಿಂಬೆ ಹಣ್ಣಿನ ರಸವನ್ನು ಮಾತ್ರ ಸೇವಿಸುವುದು ವಿಶೇಷವಾಗಿದೆ.  
 
ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ 'ಮೈಸೂರು ದಸರಾ' ವಿಶ್ವಪ್ರಸಿದ್ಧವಾಗಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಕಾವೇರಿ ವಿವಾದ: ಮಾಜಿ ಪ್ರಧಾನಿ ದೇವೇಗೌಡರಿಂದ ನಿರಶನ ಆರಂಭ