Select Your Language

Notifications

webdunia
webdunia
webdunia
webdunia

ಕಾವೇರಿ ವಿವಾದ: ಮಾಜಿ ಪ್ರಧಾನಿ ದೇವೇಗೌಡರಿಂದ ನಿರಶನ ಆರಂಭ

ಕಾವೇರಿ ವಿವಾದ: ಮಾಜಿ ಪ್ರಧಾನಿ ದೇವೇಗೌಡರಿಂದ ನಿರಶನ ಆರಂಭ
ಬೆಂಗಳೂರು , ಶನಿವಾರ, 1 ಅಕ್ಟೋಬರ್ 2016 (11:53 IST)
ಕಾವೇರಿ ನದಿಯಿಂದ ತಮಿಳುನಾಡಿಗೆ ನೀರು ಹರಿಸುವಂತೆ ಸುಪ್ರೀಂಕೋರ್ಟ್ ಮತ್ತೆ ಆದೇಶ ನೀಡಿರುವ ಹಿನ್ನೆಲೆಯಲ್ಲಿ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ಉಪವಾಸ ಸತ್ಯಾಗ್ರಹ ಕೈಗೊಂಡಿದ್ದಾರೆ. 
 
ವಿಧಾನಸೌಧದ ಎದುರು ನಿರಶನ ಆರಂಭಿಸಿದ ಅವರು, ಬೆಳೆಗೆ ನೀರು ಇರಲಿ. ಮೊದಲು ನಮಗೆ ಕುಡಿಯಲು ನೀರು ಕೊಡಿ ಎಂದು ಮನವಿ ಮಾಡಿಕೊಂಡಿದ್ದಾರೆ.
 
ಕಾವೇರಿ ವಿವಾದದ ಕುರಿತು ಪ್ರಧಾನಿ ಮೋದಿಯವರಿಗೆ ಸಂಪೂರ್ಣ ಅರಿವಿದೆ. ಈ ಕುರಿತಂತೆ ಕೇಂದ್ರ ಚರ್ಚಿಸಿದ್ದು, ಮುಂದೆಯೂ ಚರ್ಚಿಸಲಿ ಎಂದು ಹೇಳಿದರು.
 
ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ 2006ರಲ್ಲಿ ಸುಪ್ರೀಂಕೋರ್ಟ್ ನೀಡಿರುವ ಆದೇಶದಲ್ಲಿಯೂ ಸಹ ರಾಜ್ಯಕ್ಕೆ ಅನ್ಯಾಯವಾಗಿತ್ತು. ಈ ಸಂದರ್ಭದಲ್ಲಿ ಎಚ್‌.ಡಿ.ಕುಮಾರಸ್ವಾಮಿ ಸಿಎಂ ಆಗಿದ್ದರು. ಆಗ, ಸುಪ್ರೀಂ ಆದೇಶ ವಿರೋಧಿಸಿ ಕರ್ನಾಟಕ ಪರ ವಕೀಲರಿಂದ ಎಸ್‌ಎಲ್‌ಪಿ ಸಲ್ಲಿಸಲಾಗಿತ್ತು ಎಂದು ಎಚ್.ಡಿ.ದೇವೇಗೌಡ ನೆನಪು ಮಾಡಿಕೊಂಡರು.  
 
ಕಾವೇರಿ ನದಿಯಿಂದ ತಮಿಳುನಾಡಿಗೆ ಅಕ್ಟೋಬರ್ 1 ರಿಂದ 6 ರವರೆಗೂ 6 ಸಾವಿರ ಕ್ಯೂಸೆಕ್ಸ್ ನೀರು ಬಿಡುಗಡೆ ಮಾಡುವಂತೆ ಹಾಗೂ ಕೇವಲ ನಾಲ್ಕು ದಿನಗಳಲ್ಲಿ ಕಾವೇರಿ ನಿರ್ವಹಣಾ ಮಂಡಳಿ ರಚನೆ ಮಾಡವಂತೆ ಸುಪ್ರೀಂಕೋರ್ಟ್ ದ್ವಿಸದಸ್ಯ ಪೀಠ ಆದೇಶ ಹೊರಡಿಸಿತ್ತು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಕಾವೇರಿ ವಿವಾದ: ಸರ್ವಪಕ್ಷ ಸಭೆಯಲ್ಲಿ ನಿರ್ಧಾರ ಎಂದ ಸಿಎಂ ಸಿದ್ದರಾಮಯ್ಯ