Select Your Language

Notifications

webdunia
webdunia
webdunia
webdunia

ಪ್ರಧಾನಿ ಮೋದಿ ಮನೆಗೆ ಹೊಸ ಅತಿಥಿ: ಯಾರಿದು ನೀವೇ ವಿಡಿಯೋ ನೋಡಿ

Modi Calf

Krishnaveni K

ನವದೆಹಲಿ , ಶನಿವಾರ, 14 ಸೆಪ್ಟಂಬರ್ 2024 (15:04 IST)
Photo Credit: X
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮನೆಗೆ ಹೊಸ ಅತಿಥಿಯ ಆಗಮನವಾಗಿದೆ. ಅದಕ್ಕೆ ಹೆಸರಿಟ್ಟು, ಪೂಜೆ ಮಾಡಿ ಮೋದಿ ಖುಷಿಪಟ್ಟಿದ್ದಾರೆ. ಅಷ್ಟಕ್ಕೂ ಈ ಹೊಸ ಸದಸ್ಯ ಯಾರು ಇಲ್ಲಿ ನೋಡಿ.

ಮೋದಿಗೆ ಹಸುಗಳೆಂದರೆ ಭಾರೀ ಪ್ರೀತಿ. ಇದೀಗ ಅವರ ನಿವಾಸದಲ್ಲಿನ ಹಸುವೊಂದು ಕರು ಹಾಕಿದ್ದು ಇದನ್ನು ಮೋದಿ ಟ್ವೀಟ್ ಮಾಡಿ ಸಂಭ್ರಮಿಸಿದ್ದಾರೆ. ಕರುವಿಗೆ ದೀಪ ಜ್ಯೋತಿ ಎಂದು ಹೆಸರಿಟ್ಟಿರುವ ಮೋದಿ ಅದರ ಕೊರಳಿಗೆ ಹಾರ ಹಾಕಿ ಗೋ ಪೂಜೆ ಮಾಡಿ ಸಂಭ್ರಮದಿಂದ ಬರಮಾಡಿಕೊಂಡಿದ್ದಾರೆ.

ಇದಕ್ಕೆ ದೀಪಜ್ಯೋತಿ ಎಂದು ಹೆಸರಿಡಲೂ ಕಾರಣವನ್ನೂ ಅವರು ವಿವರಿಸಿದ್ದಾರೆ. ಕರುವಿನ ಹಣೆಯ ಮೇಲೆ ಬಿಳಿ ಬಣ್ಣದ ದೀಪವನ್ನು ಹೋಲುವ ನಾಮವಿದೆ. ಈ ಕಾರಣಕ್ಕೆ ಅದಕ್ಕೆ ದೀಪ ಜ್ಯೋತಿ ಎಂದು ಹೆಸರಿಡಲಾಗಿದೆ. ನಮ್ಮ ಧರ್ಮಗ್ರಂಥಗಳಲ್ಲಿ ಗಾವಃ ಸರ್ವಸುಖ ಪ್ರದಾಃ ಎಂಬ ಮಾತಿದೆ. ಲೋಕಕಲ್ಯಾಣ ಮಾರ್ಗದಲ್ಲಿರುವ ಪ್ರಧಾನ ಮಂತ್ರಿ ನಿವಾಸಕ್ಕೆ ಹೊಸ ಸದಸ್ಯರೊಬ್ಬರು ಸೇರ್ಪಡೆಯಾಗಿದ್ದಾರೆ. ಇದರ ಹಣೆಯಲ್ಲಿ ದೀಪವನ್ನು ಹೋಲುವ ನಾಮವಿದೆ. ಹೀಗಾಗಿ ಇದಕ್ಕೆ ಪ್ರೀತಿಯಿಂದ ದೀಪ ಜ್ಯೋತಿ ಎಂದು ಹೆಸರಿಟ್ಟಿದ್ದೇನೆ ಎಂದಿದ್ದಾರೆ ಮೋದಿ.

ದೇವರ ಮನೆಯಲ್ಲಿ ಕರುವಿಗೆ ಶಾಲು ಹೊದೆಸಿ ಹಾರ ಹಾಕಿ ಮೋದಿ ಪೂಜೆ ಮಾಡುತ್ತಿರುವ ಮತ್ತು ಮನೆಯೊಳಗೆ ಕರುವಿನೊಂದಿಗೆ ಓಡಾಡಿ ಸಂಭ್ರಮಿಸುವ ಕ್ಷಣಗಳ ವಿಡಿಯೋವನ್ನು ಅವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಆ ವಿಡಿಯೋ ಇಲ್ಲಿದೆ ನೋಡಿ.



Share this Story:

Follow Webdunia kannada

ಮುಂದಿನ ಸುದ್ದಿ

ದಲಿತ ಅಂಗವಿಕಲನ ಸೈಟ್‌ನಲ್ಲಿ ಸಿದ್ದರಾಮಯ್ಯ ಮನೆ: ಎಚ್‌ಡಿಕೆ ಹೊಸ ಬಾಂಬ್‌