Publish Date: Tue, 10 Mar 2020 (09:37 IST)
Updated Date: Tue, 10 Mar 2020 (09:39 IST)
ನವದೆಹಲಿ: ಪ್ರಧಾನಿ ಮೋದಿ ಟ್ವಿಟರ್ ಖಾತೆ ಪಾಸ್ ವರ್ಡ್ ಏನು? ಹೀಗೊಂದು ಪ್ರಶ್ನೆಗೆ ಸ್ವತಃ ಪ್ರಧಾನಿ ಮೋದಿ ಪ್ರತಿಕ್ರಿಯಿಸಿದ್ದಾರೆ!
ಮಹಿಳಾ ದಿನಾಚರಣೆ ಅಂಗವಾಗಿ ಒಂದು ದಿನದ ಮಟ್ಟಿಗೆ ಸಾಧಕ ಮಹಿಳೆಯರಿಗೆ ತಮ್ಮ ಟ್ವಿಟರ್ ಖಾತೆ ಬಿಟ್ಟುಕೊಟ್ಟಿದ್ದ ಪ್ರಧಾನಿ ಮೋದಿಗೆ ಟ್ವಿಟರಿಗರೊಬ್ಬರು ನಿಮ್ಮ ಖಾತೆಯ ಪಾಸ್ ವರ್ಡ್ ಹೇಳಿ ಎಂದು ಕೇಳಿದ್ದರು. ಇದಕ್ಕೆ ಪ್ರಧಾನಿ ಮೋದಿ ಖಾತೆಯನ್ನು ಈ ದಿನ ನಿರ್ವಹಿಸಿದ್ದ ಚೆನ್ನೈ ಮೂಲದ ಮಹಿಳೆ ಸ್ನೇಹ ಮೋಹನ್ ದಾಸ್ ತಕ್ಕ ಉತ್ತರ ನೀಡಿದ್ದಾರೆ.
‘ನ್ಯೂ ಇಂಡಿಯಾ.. ಲಾಗಿನ್ ಮಾಡಲು ಪ್ರಯತ್ನಿಸಿ’ ಎಂದಿದ್ದಾರೆ. ಆಕೆ ಪ್ರಧಾನಿ ಖಾತೆಯಿಂದ ನೀಡಿರುವ ಈ ಉತ್ತರ ಈಗ ಭಾರೀ ವೈರಲ್ ಆಗಿದೆ.