Webdunia - Bharat's app for daily news and videos

Install App

ಸಿಖ್ಖರ ಪೇಟ ಧರಿಸಿ ಊಟ ಬಡಿಸಿದ ಪ್ರಧಾನಿ ಮೋದಿ

Krishnaveni K
ಸೋಮವಾರ, 13 ಮೇ 2024 (11:23 IST)
ಪಾಟ್ನಾ: ಬಿಹಾರದ ಪಾಟ್ನಾದಲ್ಲಿರುವ ಹರಿಮಂದಿರ್ ಜಿ ಪಾಟ್ನಾ ಸಾಹಿಬ್ ಗುರುದ್ವಾರದಲ್ಲಿ ಪ್ರಧಾನಿ ಮೋದಿ ಸಿಖ್ಖರ ಪೇಟ ಧರಿಸಿ ಭಕ್ತರಿಗೆ ಊಟ ಬಡಿಸಿದ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಚುನಾವಣೆ ಪ್ರಚಾರ ನಿಮಿತ್ತ ಮೋದಿ ಪಾಟ್ನಾಕ್ಕೆ ಭೇಟಿ ನೀಡಿದ್ದರು. ಈ  ವೇಳೆ ಸಿಖ್ಖರ ಪವಿತ್ರ ಧಾರ್ಮಿಕ ಕೇಂದ್ರಕ್ಕೆ ಆಗಮಿಸಿದ್ದಾರೆ. ಮೋದಿ ಆಗಮನ ಹಿನ್ನಲೆಯಲ್ಲಿ ಧಾರ್ಮಿಕ ಕೇಂದ್ರದ ಸುತ್ತ ಬಿಗಿ ಬಂಧೋಬಸ್ತ್ ಏರ್ಪಡಿಸಲಾಗಿತ್ತು. ಈ ವೇಳೆ ಮೋದಿ ಊಟ ಬಡಿಸುವ ಮೂಲಕ ಸೇವೆ ಮಾಡಿದ್ದಾರೆ.

ಕೇಸರಿ ಬಣ್ಣದ ಸಿಖ್ಖರ ಪೇಟ ಧರಿಸಿ ಮೋದಿ ಸಾಲಾಗಿ ಕುಳಿತಿದ್ದ ಭಕ್ತರಿಗೆ ಸ್ಟೀಲ್ ಬಕೆಟ್ ಹಿಡಿದುಕೊಂಡು ಬಡಿಸಿದ್ದಾರೆ. ಈ ವೇಳೆ ಪ್ರತಿಯೊಬ್ಬರೂ ಅವರಿಗೆ ವಂದಿಸಿದ್ದಾರೆ. ಅಷ್ಟೇ ಅಲ್ಲದೆ, ಊಟ ತಯಾರಿಸಲೂ ಮೋದಿ ಕೈ ಜೋಡಿಸಿದ್ದಾರೆ ಎಂದು ತಿಳಿದುಬಂದಿದೆ.

ಇದೊಂದು ಸೇವೆ ಎಂಬಂತೆ ಅವರು ಮಾಡಿದ್ದಾರೆ. ನಿನ್ನೆ ಬಿಹಾರದಲ್ಲಿ ಮೋದಿ, ಸಿಎಂ ನಿತೀಶ್ ಕುಮಾರ್ ಜೊತೆ ರೋಡ್ ಶೋ ನಡೆಸಿದ್ದರು. ಈ ವೇಳೆ ಸಾಕಷ್ಟು ಜನ ಪಾಲ್ಗೊಂಡಿದ್ದರು. ನಿತೀಶ್ ಕುಮಾರ್ ಕೂಡಾ ಕೈಯಲ್ಲಿ ಕಮಲದ ಚಿಹ್ನೆ ಹಿಡಿದು ಜನರತ್ತ ಕೈ ಬೀಸಿದ್ದು ಸಾಕಷ್ಟು ಚರ್ಚೆಗೂ ಕಾರಣವಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments