ನವದೆಹಲಿ: ಪ್ರಣಬ್ ಮುಖರ್ಜಿ ಅಧಿಕಾರಾವಧಿ ಮುಗಿಯುತ್ತಾ ಬರುತ್ತಿದ್ದಂತೆ ಭಾರತಕ್ಕೆ ಮುಂದಿನ ರಾಷ್ಟ್ರಪತಿ ಯಾರು ಎನ್ನುವ ಚರ್ಚೆ ಶುರುವಾಗಿದೆ. ಮೂಲಗಳ ಪ್ರಕಾರ ಪ್ರಧಾನಿ ಮೋದಿ ಮುಂದಿನ ರಾಷ್ಟ್ರಪತಿ ಯಾರೆಂದು ನಿರ್ಧಾರ ಮಾಡಿಯಾಗಿದೆಯಂತೆ.
ಅವರು ಬೇರಾರೂ ಅಲ್ಲ, ಬಿಜೆಪಿಯ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ. ಸ್ವತಃ ಪ್ರಧಾನಿ ಮೋದಿ ಅಡ್ವಾಣಿ ಹೆಸರನ್ನು ಸೂಚಿಸಿದ್ದಾರೆ ಎಂದು ಮೂಲಗಳು ಹೇಳಿವೆ. ಗುಜರಾತ್ ನಲ್ಲಿ ನಡೆದ ಸಭೆಯ ವೇಳೆ ಮೋದಿ ಇಂತಹದ್ದೊಂದು ಪ್ರಸ್ತಾಪ ಮಾಡಿದ್ದಾರಂತೆ.
ಆ ಮೂಲಕ ಬಿಜೆಪಿ ಹಿರಿಯನಿಗೆ ಸೂಕ್ತ ಗೌರವ ನೀಡುವ ಉದ್ದೇಶ ಮೋದಿಯದ್ದು ಎನ್ನಲಾಗುತ್ತಿದೆ. ಈ ವರ್ಷ ಜುಲೈಯಲ್ಲಿ ನಡೆಯಲಿರುವ ರಾಷ್ಟ್ರಪತಿ ಚುನಾವಣೆಗೆ ತನಗೆ ಬೇಕಾದವರನ್ನು ಆರಿಸುವಷ್ಟು ರಾಜ್ಯ ಸಭಾ ಸದಸ್ಯರ ಬಲ ಬಿಜೆಪಿಗೆ ಇರುವುದರಿಂದ ಮೋದಿ ಆಸೆ ನೆರವೇರುವುದಂತೂ ಖಂಡಿತಾ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ