Select Your Language

Notifications

webdunia
webdunia
webdunia
webdunia

ನೋಟು ಅಮಾನ್ಯತೆ ಯಜ್ಞದಲ್ಲಿ ಜನಸಾಮಾನ್ಯರ ಬಲಿ: ರಾಹುಲ್ ಗಾಂಧಿ

ನೋಟು ಅಮಾನ್ಯತೆ ಯಜ್ಞದಲ್ಲಿ ಜನಸಾಮಾನ್ಯರ ಬಲಿ: ರಾಹುಲ್ ಗಾಂಧಿ
ನವದೆಹಲಿ , ಬುಧವಾರ, 28 ಡಿಸೆಂಬರ್ 2016 (14:44 IST)
ನೋಟು ನಿಷೇಧದ ವಿರುದ್ಧ ಪ್ರಧಾನಿ ಮೋದಿ ಅವರ ಮೇಲೆ ವಾಗ್ದಾಳಿಯನ್ನು ಮುಂದುವರೆಸಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ಕಪ್ಪುಹಣದ ವಿರುದ್ಧ ನಡೆಸುತ್ತಿರುವ ನೋಟು ನಿಷೇಧದ ಯಜ್ಞದಲ್ಲಿ ಪ್ರಧಾನಿ ಸಾಮಾನ್ಯ ಜನರನ್ನು ಬಲಿ ನೀಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

 
ಇಂದು ನವದೆಹಲಿಯಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ 132ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಮಾತನಾಡುತ್ತಿದ್ದ ಅವರು, ಯಜ್ಞಗಳಲ್ಲಿ ದೇಶದ ಸಾಮಾನ್ಯ ಜನರನ್ನು ಬಲಿ ನೀಡಲಾಗುತ್ತದೆ. ಹಾಗೆ ಮೋದಿ ಕೂಡ ತಮ್ಮ ಅತಿ ದೊಡ್ಡ ಶ್ರೀಮಂತ ಕುಟುಂಬದವರಿಗಾಗಿ ನಡೆಸುತ್ತಿರುವ "ರಾಷ್ಟ್ರಯಜ್ಞ" ದಲ್ಲಿ  ಬಡವರನ್ನು ಬಲಿ ನೀಡುತ್ತಿದ್ದಾರೆ ಎಂದಿದ್ದಾರೆ. 
 
ಈ 50 ಕುಟುಂಬಗಳೇ ಮೋದಿಜಿ ಅವರನ್ನು ನಿರ್ಮಿಸಿದ್ದು, ದುಬಾರಿ ಜಾಹೀರಾತುಗಳಿಗೆ ಅವರು ಹಣ ಸಂದಾಯ ಮಾಡುತ್ತಾರೆ ಮತ್ತು ಮೋದಿ ಅವರೊಂದಿಗೆ ವಿದೇಶಗಳಿಗೆ ಹಾರಾಟ ನಡೆಸುತ್ತಾರೆ. ಭಾರತದ ಸಾರ್ವಜನಿಕ ವಲಯಗಳ ಬ್ಯಾಂಕ್‌ಗಳಿಂದ ಈ ಸಿರಿವಂತರು 8,00,000  ರೂಪಾಯಿಯನ್ನು ಪಡೆದಿದ್ದಾರೆ ಮತ್ತು ಇದನ್ನು ಹಿಂತಿರುಗಿಸುತ್ತಿಲ್ಲ. ಹೀಗಾಗಿ ಮೋದಿ ಅವರು ಎರಡು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ತಮ್ಮ ಸ್ನೇಹಿತರ ಸಾಲವನ್ನು ಹೇಗೆ ಬ್ಯಾಂಕ್‌ಗಳಿಗೆ ಭರಿಸುವುದು ಮತ್ತು ಈ ಬ್ಯಾಂಕ್‌ಗಳು ಸಾಲವನ್ನು ವಿಸ್ತರಿಸಲು ಸಾಧ್ಯವಾಗದಿರುವುದು. ಹೀಗಾಗಿ ಮೋದಿ ಅವರು ಭ್ರಷ್ಟಾಚಾರದ ವಿರುದ್ಧ ಈ ರಾಷ್ಟ್ರ ಯಜ್ಞವನ್ನು ಪ್ರಾರಂಭಿಸಿದ್ದಾರೆ ಮತ್ತು ಬಡ, ರೈತ ಮತ್ತು ಮಧ್ಯಮ ವರ್ಗದವರು ಮತ್ತು ಸಣ್ಣ ಸಮ್ಣ ವ್ಯಾಪಾರಿಗಳನ್ನು ಬಲಿ ನೀಡುತ್ತಿದ್ದಾರೆ ಎಂದು ರಾಹುಲ್ ಗಂಭೀರವಾಗಿ ಆರೋಪಿಸಿದ್ದಾರೆ.
 
ಪ್ರತಿ ಯಜ್ಞದಲ್ಲಿಯೂ ಯಾವುದಾದರೊಂದು ಪ್ರಾಣಿ ಅಥವಾ ವಸ್ತುವನ್ನು ಬಲಿ ಕೊಡುವುದು ಸಂಪ್ರದಾಯ ಮತ್ತು ಪದ್ಧತಿ. ಹಾಗೆಯೇ ಮೋದಿಯವರು ಈ ಯಜ್ಞದಲ್ಲಿ ದೇಶದ ಸಾಮಾನ್ಯ ಜನರನ್ನು ಬಲಿ ಕೊಡುತ್ತಿದ್ದಾರೆ ಎಂದರು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಕಂಸ ಯಾರು ಅರ್ಜುನ ಯಾರು ಮುಂದೆ ತಿಳಿಯಲಿದೆ: ಈಶ್ವರಪ್ಪ ವಿರುದ್ಧ ಯಡ್ಡಿಯೂರಪ್ಪ ಗುಡುಗು