Select Your Language

Notifications

webdunia
webdunia
webdunia
webdunia

ಇಂದು 7.30ಕ್ಕೆ ದೇಶವನ್ನುದ್ದೇಶಿಸಿ ಮೋದಿ ಮಾತು

PM Modi
ನವದೆಹಲಿ , ಶನಿವಾರ, 31 ಡಿಸೆಂಬರ್ 2016 (18:09 IST)
ಇಂದು ರಾತ್ರಿ 7.30ಕ್ಕೆ ಪ್ರಧಾನಿ ಮೋದಿ ದೇಶವನ್ನುದ್ದೇಶಿಸಿ ಮಾತನಾಡಲಿದ್ದು ನೋಟ್ ಬ್ಯಾನ್ ನೋವಿನ ನಂತರ ಸಿಹಿ ನೀಡಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ.
 
ಅಧಿಕೃತವಾಗಿ ಭಾಷಣದ ಸಮಯವನ್ನು ಘೋಷಣೆ ಮಾಡಲಾಗಿದ್ದು, ರಾತ್ರಿ 7.30ಕ್ಕೆ ಪ್ರಧಾನಿ ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ ಎಂದು ಭಾರತೀಯ ಜನತಾ ಪಕ್ಷ ಟ್ವೀಟ್ ಮಾಡಿದೆ.
 
500 ಮತ್ತು 1,000ರೂಪಾಯಿಗಳ ನೋಟು ರದ್ದುಗೊಳಿಸಿದ ಬಳಿಕ ವಿಪಕ್ಷಗಳಿಂದ ಮೋದಿ ತೀವ್ರ ಟೀಕೆಗೆ ಗುರಿಯಾಗಿದ್ದರೂ, ಹಲವು ಸಮಸ್ಯೆಗಳ ನಡುವೆಯೂ ದೇಶವಾಸಿಗಳು ತಾಳ್ಮೆಯಿಂದ ಪ್ರಧಾನಿಮೋದಿ ಅವರಿಗೆ ಬೆಂಬಲ ವ್ಯಕ್ತ ಪಡಿಸಿದ್ದು ನಾಳೆಯಿಂದಾದರೂ ತಮ್ಮ ಸಮಸ್ಯೆಗಳು ನೀಗುತ್ತವೆಯೇ ಎಂಬ ನಿರೀಕ್ಷೆ ಹೊತ್ತಿದ್ದಾರೆ.  ಹೊಸ ವರ್ಷದ ಉಡುಗೊರೆಯಾಗಿ ಪ್ರಧಾನಿ ದೇಶವಾಸಿಗಳಿಗೆ ಬಂಪರ್ ಕೊಡುಗೆಗಳನ್ನು ನೀಡಲಿದ್ದಾರೆಯೇ? ಅಥವಾ ಮತ್ತೆ ಹೊಸ ಶಾಕ್ ನೀಡಲಿದ್ದಾರೆಯೇ ಎಂಬ ಕುತೂಹಲದ ಬಯಕೆ ಸಂಪೂರ್ಣ ದೇಶಕ್ಕಿದೆ. 
 
ನವೆಂಬರ್ 8 ರಂದು ನೋಟ್ ನಿಷೇಧಗೊಂಡ ಬಳಿಕ ಮೋದಿ ದೇಶವನ್ನುದ್ದೇಶಿಸಿ ಮಾತನ್ನಾಡುತ್ತಿರುವುದು ಇದು ಎರಡನೆಯ ಬಾರಿ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ನೋಟು ಬಿಕ್ಕಟ್ಟು: ಬೆಂಗಳೂರಿನಲ್ಲಿ ಸೆಕ್ಸ್ ಸೇವೆಗಳು ಡಿಜಿಟಲ್‌ನತ್ತ...!