Publish Date: Tue, 20 Jan 2026 (13:57 IST)
Updated Date: Tue, 20 Jan 2026 (13:59 IST)
ನವದೆಹಲಿ: ತಮ್ಮ ಬಾಸ್ ಯಾರು ಎಂದು ಪ್ರಧಾನಿ ನರೇಂದ್ರ ಮೋದಿ ಇಂದು ಹೇಳಿಕೊಂಡಿದ್ದಾರೆ. ನಾನು ಕೇವಲ ಪಕ್ಷದ ಕಾರ್ಯಕರ್ತನಷ್ಟೇ ಎಂದಿದ್ದಾರೆ.
ಬಿಜೆಪಿ ಎಂದರೆ ನರೇಂದ್ರ ಮೋದಿ, ನರೇಂದ್ರ ಮೋದಿ ಎಂದರೆ ಬಿಜೆಪಿ ಎನ್ನುವಷ್ಟು ಪ್ರಭಾವಿ ನಾಯಕ ಅವರು. ಆದರೆ ಇಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಅಧಿಕಾರ ಸ್ವೀಕಾರ ವೇಳೆ ತಮ್ಮ ಬಾಸ್ ಯಾರು ಎಂದು ಮೋದಿ ಹೇಳಿಕೊಂಡಿದ್ದಾರೆ.
ಇಂದು ಬಿಜೆಪಿಯ ನೂತನ ರಾಷ್ಟ್ರೀಯ ಅಧ್ಯಕ್ಷರಾಗಿ ನಿತಿನ್ ನಬಿನ್ ಅಧಿಕಾರ ಸ್ವೀಕರಿಸಿದರು. ಈ ವೇಳೆ ಮಾತನಾಡಿರುವ ಅವರು ನನ್ನ ಬಾಸ್ ನಿತಿನ್ ನಬಿನ್ ಅವರು. ನಾನು ಕೇವಲ ಪಕ್ಷದ ಕಾರ್ಯಕರ್ತ ಅಷ್ಟೇ. ಬಿಜೆಪಿ ಒಂದು ಕುಟುಂಬ ಇದ್ದಂತೆ. ನಮ್ಮ ಅಧ್ಯಕ್ಷರು ಬದಲಾಗಬಹುದು. ಆದರೆ ಆದರ್ಶಗಳು ಬದಲಾಗಲ್ಲ ಎಂದು ಅವರು ಈ ಸಂದರ್ಭದಲ್ಲಿ ಹೇಳಿದ್ದಾರೆ.
ನಿತಿನ್ ನಬಿನ್ ಅವರಿಗೆ ಯುವ ಶಕ್ತಿ ಮತ್ತು ಪಕ್ಷ ಸಂಘಟನೆಯಲ್ಲಿ ಅಪಾರ ಅನುಭವವಿದೆ. ಅವರ ಅನುಭವ ಪಕ್ಷಕ್ಕೆ ಉಪಯೋಗವಾಗಲಿದೆ ಎಂದು ಅವರು ಈ ವೇಳೆ ಹೇಳಿದ್ದಾರೆ. 45 ವರ್ಷದ ನಿತಿನ್ ನಬಿನ್ ಬಿಜೆಪಿ ನೂತನ ರಾಷ್ಟ್ರೀಯ ಅಧ್ಯಕ್ಷರಾಗಿ ಇಂದು ಚುನಾಯಿತರಾಗಿದ್ದಾರೆ.