Publish Date: Mon, 29 Jun 2020 (09:49 IST)
Updated Date: Mon, 29 Jun 2020 (09:52 IST)
ಮಂಡ್ಯ: ಕೆಲವು ದಿನಗಳ ಹಿಂದೆ ಮಂಡ್ಯದ ಮಳವಳ್ಳಿಯ ರೈತ ಕಾಮೇಗೌಡ ಎಂಬವರ ಸಾಮಾಜಿಕ ಕಳಕಳಿ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು. ಇದೀಗ ಆ ರೈತನಿಗೆ ಪ್ರಧಾನಿ ಮೋದಿ ತಮ್ಮ ಮನ್ ಕೀ ಬಾತ್ ನಲ್ಲಿ ಅಭಿನಂದಿಸಿದ್ದಾರೆ.
ಜಲಸಂರಕ್ಷಣೆ ಕಾಯಕದಲ್ಲಿ ತೊಡಗಿರುವ ಕಾಮೇಗೌಡ ಯಾವ ಪ್ರತಿಫಲಾಪೇಕ್ಷೆಯೂ ಇಲ್ಲದೇ ಇದುವರೆಗೆ 16 ಕೊಳಗಳನ್ನು ನಿರ್ಮಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇವರ ನಿಸ್ವಾರ್ಥ ಸೇವೆಯನ್ನು ಇದೀಗ ಪ್ರಧಾನಿ ಮೋದಿ ಕೊಂಡಾಡಿದ್ದಾರೆ.
ಕಾಮೇಗೌಡರ ಸಾಧನೆ ಬಗ್ಗೆ ಉಲ್ಲೇಖಿಸಿರುವ ಪ್ರಧಾನಿ ಮೋದಿ ಅವರ ಪ್ರಯತ್ನ ತುಂಬಾ ದೊಡ್ಡದು.ಅವರು ನಿರ್ಮಿಸಿದ್ದು ಸಣ್ಣ ಕೊಳಗಳೇ ಆಗಿರಬಹುದು. ಆದರೆ ಅವರು ಪರಿಶ್ರಮದಿಂದ ನಿರ್ಮಿಸಿರುವ ಕೊಳಗಳಿಂದ ಇಂದು ಅವರ ಊರಿನವರಿಗೆ ಹೊಸ ಜೀವನ ಸಿಕ್ಕಂತಾಗಿದೆ ಎಂದು ಕಾಮೇಗೌಡರ ಬಗ್ಗೆ ಹೊಗಳಿದ್ದಾರೆ.