ತಮ್ಮ ವಿರುದ್ಧ ಪ್ರತಿಭಟಿಸುತ್ತಿದ್ದ ವಿಪಕ್ಷ ನಾಯಕರಿಗೆ ನೀರು ಕೊಟ್ಟ ಪ್ರಧಾನಿ ಮೋದಿ

Krishnaveni K
ಬುಧವಾರ, 3 ಜುಲೈ 2024 (11:38 IST)
ನವದೆಹಲಿ: ನಿನ್ನೆ ಸಂಸತ್ ನಲ್ಲಿ ಪ್ರಧಾನಿ ಮೋದಿ ಭಾಷಣದ ವೇಳೆ ವಿಪಕ್ಷಗಳು ಬಾವಿಗಿಳಿದು ಪ್ರತಿಭಟನೆ ನಡೆಸುತ್ತಿದ್ದರು. ಆದರೆ ಈ ಸಂಸದರಿಗೆ ಸ್ವತಃ ಪ್ರಧಾನಿ ಮೋದಿ ನೀರು ನೀಡಿದ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗಿದೆ.

ಲೋಕಸಭೆಯಲ್ಲಿ ನಿನ್ನೆ ಪ್ರಧಾನಿ ಮೋದಿ ರಾಷ್ಟ್ರಪತಿಗಳ ಭಾಷಣಕ್ಕೆ ವಂದನಾ ನಿರ್ಣಯ ಮಂಡಿಸುತ್ತಿದ್ದರು. ಈ ವೇಳೆ ವಿಪಕ್ಷಗಳು ಸದನದ ಬಾವಿಗಿಳಿದು ಘೋಷಣೆಗಳನ್ನು ಕೂಗಿ ಗದ್ದಲವೆಬ್ಬಿಸುತ್ತಿದ್ದರು. ತಮ್ಮ ವಿರುದ್ದವೇ ಘೋಷಣೆ ಕೂಗಿದ ವಿಪಕ್ಷ ನಾಯಕರಿಗೆ ಮೋದಿ ಸ್ವತಃ ತಾವೇ ನೀರು ಕುಡಿಸಿದ್ದಾರೆ.

ಭಾಷಣದ ನಡುವೆ ಸಹಾಯಕರಲ್ಲಿ ನೀರು ತರಲು ಹೇಳಿದ ಮೋದಿ ಒಂದು ಲೋಟ ನೀರನ್ನು ತಮ್ಮ ಆಸನದ ಕೆಳ ಭಾಗದಲ್ಲೇ ಪ್ರತಿಭಟನೆ ನಡೆಸುತ್ತಿದ್ದ ಸಂಸದರಿಗೆ ನೀರು ಬೇಕಾ ಎಂದು ಕೇಳಿದರು. ಆ ಪೈಕಿ ಒಬ್ಬರು ಬೇಡವೆಂದು ನಿರಾಕರಿಸಿದರೆ ಮತ್ತೊಬ್ಬ ಸಂಸದರು ನೀರು ಪಡೆದು ಕುಡಿದರು.

ಬಳಿಕ ಖಾಲಿ ಲೋಟವನ್ನು ಮೋದಿ ಆಸನದ ಬಳಿಯೇ ಇರಿಸಿ ಮತ್ತೆ ಮೋದಿ ವಿರುದ್ಧವೇ ಘೋಷಣೆ ಮುಂದುವರಿಸಿದರು. ಈ ವಿಡಿಯೋವನ್ನು ಹಂಚಿಕೊಂಡಿರುವ ಬಿಜೆಪಿ ನಾಯಕರು, ಬೆಂಬಲಿಗರು, ಮೋದಿಜಿ ಎಂದರೆ ಹೀಗೆ ನೋಡಿ. ತಮ್ಮ ವಿರುದ್ಧ ಘೋಷಣೆ ಕೂಗುವವರಿಗೇ ನೀರು ಕುಡಿಸುತ್ತಾರೆ ಎಂದು ತಮಾಷೆ ಮಾಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Gold Price: ಇಂದಿನ ಚಿನ್ನ,ಬೆಳ್ಳಿ ದರ ವಿವರ ಇಲ್ಲಿದೆ

ಯಾರಿಗೆ ಬಿಪಿ, ಶುಗರ್, ಹೃದಯ ಸಮಸ್ಯೆ ಬರುವ ಸಾಧ್ಯತೆ ಹೆಚ್ಚು: ಡಾ ಸಿಎನ್ ಮಂಜುನಾಥ್

ಡಾ ಕೃತಿಕಾ ರೆಡ್ಡಿ ಪೋಸ್ಟ್ ಮಾರ್ಟಂ ಮಾಡದಂತೆ ಡಾ ಮಹೇಂದ್ರ ರೆಡ್ಡಿ ಮಾಡಿದ್ದ ಉಪಾಯವೇನು

ಡಾ ಕೃತಿಕಾ ರೆಡ್ಡಿ ಮರ್ಡರ್ ಕೇಸ್ ಗೆ ಟ್ವಿಸ್ಟ್: ಪತಿ ಮಹೇಂದ್ರ ರೆಡ್ಡಿ ಬಗ್ಗೆ ಮತ್ತೊಂದು ಸ್ಪೋಟಕ ಸತ್ಯ

ರಷ್ಯಾದಿಂದ ಭಾರತ ತೈಲ ಖರೀದಿಸಲ್ಲ ಎಂದು ಮೋದಿ ಒಪ್ಪಿಕೊಂಡಿದ್ದಾರೆ: ಟ್ರಂಪ್ ಸ್ವಯಂ ಘೋಷಣೆ

ಮುಂದಿನ ಸುದ್ದಿ
Show comments