ಪ್ರಧಾನಿ ನರೇಂದ್ರ ಮೋದಿ ಮತ್ತು ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನ ಜಂಟಿಯಾಗಿ ಇಂದು ಶ್ರೀಲಂಕಾದ ಉತ್ತರ ಪ್ರಾಂತ್ಯದ ರಾಜಧಾನಿ ನಗರ ಜಾಫ್ನಾದಲ್ಲಿರುವ ಕ್ರೀಡಾಂಗಣವನ್ನು ಉದ್ಘಾಟಿಸಿದ್ದಾರೆ. ಇತ್ತೀಚಿಗೆ ಭಾರತ ಈ ಕ್ರೀಡಾಂಗಣವನ್ನು ನವೀಕರಿಸಿತ್ತು.
ದುರೈಯಪ್ಪ ಕ್ರೀಡಾಂಗಣದಲ್ಲಿ ನಡೆದ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಿರಿಸೇನ ಅವರಿಗೆ ದೆಹಲಿಯಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನಿ ಮೋದಿ ಸಾಥ್ ನೀಡಿದರು.
ಜಾಫ್ನಾದ ಮಾಜಿ ಮೇಯರ್ ದಿವಂಗತ ಅಲ್ಫ್ರೆಡ್ ತಂಬಿರಾಜ ದುರೈಯಪ್ಪ ಅವರ ಗೌರವಾರ್ಥ ಕ್ರೀಡಾಂಗಣಕ್ಕೆ ಅವರದೇ ಹೆಸರನ್ನು ಇಡಲಾಗಿದೆ. 1997ರಿಂದ ಕ್ರೀಡಾಂಗಣವನ್ನು ಉಪಯೋಗಿಸಿರಲಿಲ್ಲ. 7 ಕೋಟಿ ರೂಪಾಯಿ ವೆಚ್ಚದಲ್ಲಿ ಭಾರತ ಇದನ್ನು ನಿರ್ಮಿಸಿಕೊಟ್ಟಿದೆ.
ಜೂನ್ 21 ರಂದು ನಡೆಯಲಿರುವ ದ್ವಿತೀಯ ಅಂತರಾಷ್ಟ್ರೀಯ ಯೋಗಾದಿನದ ಪ್ರಯುಕ್ತ ಕ್ರೀಡಾಂಗಣದಲ್ಲಿಂದು ಯೋಗ ಪ್ರದರ್ಶನವನ್ನು ಸಹ ಹಮ್ಮಿಕೊಳ್ಳಲಾಗಿತ್ತು.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ
ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.