ನವಿಲಿಗೆ ತಿನಿಸಲು ಸಭೆ ಮಧ್ಯದಲ್ಲೇ ಎದ್ದು ಹೋಗಿದ್ದರು: ಅಮಿತ್‌ ಶಾ

Webdunia
ಗುರುವಾರ, 12 ಮೇ 2022 (16:16 IST)
ಪ್ರಧಾನಿ ನರೇಂದ್ರ ಮೋದಿ ಎಷ್ಟು ಭಾವುಕರು ಅಂದರೆ ನವಿಲಿಗೆ ತಿನಿಸಲು ಒಂದು ಬಾರಿ ಅತ್ಯಂತ ಮುಖ್ಯವಾದ ಸಭೆಯ ಮಧ್ಯದಲ್ಲೇ ಎದ್ದು ಹೋಗಿದ್ದರು ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿದ್ದಾರೆ.
ಮೋದಿ ಅವರ ರಾಜಕೀಯ ಜೀವನ ಆಧರಿಸಿದ ಮೋದಿ @20: ಡ್ರೀಮ್ಸ್‌ ಮೀಟ್‌ ಡೆಲಿವರಿ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅತ್ಯಂತ ಮುಖ್ಯವಾದ ಸಭೆ ನಡೆಯುತ್ತಿದ್ದಾಗ ಮೋದಿ ನವಿಲಿನ ಹಸಿವಿನ ಬಗ್ಗೆ ಗಮನ ಹರಿಸಿದ್ದು ನೋಡಿ ಅಚ್ಚರಿ ಆಗಿತ್ತು ಎಂದರು.
ಸಭೆ ನಡೆಯುತ್ತಿದ್ದಾಗ ನವಿಲು ಗಾಜಿನ ಗ್ಲಾಸ್‌ ಉರುಳಿಸಿತ್ತು. ಇದನ್ನು ಗಮನಿಸಿದ ಅವರು ನವಿಲು ಎಷ್ಟು ಹಸಿದಿದೆ ಎಂದು ತಿಳಿದುಕೊಂಡು ಕೂಡಲೇ ಆ ಕಡೆ ಗಮನ ಹರಿಸಿದರು. ನವಿಲಿನ ಹಸಿವು ಗುರುತಿಸಿ ಸಭೆಯ ನಡುವೆ ಆ ಕಡೆ ಗಮನ ಹರಿಸಿದ್ದಾರೆಂದರೆ ಅವರು ಎಷ್ಟು ಭಾವನಾತ್ಮಕ ಜೀವಿ ಎಂಬುದು ತಿಳಿಯುತ್ತದೆ ಎಂದು ಅಮಿತ್‌ ಶಾ ವಿವರಿಸಿದರು.
2020ರಲ್ಲಿ ಪ್ರಧಾನಿ ಮೋದಿ ನವಿಲಿಗೆ ಆಹಾರ ತಿನಿಸುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿ ಸಾಕಷ್ಟು ಸುದ್ದಿ ಮಾಡಿತ್ತು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪಹಲ್ಗಾಮ್‌ ಭಯೋತ್ಪಾದನಾ ದಾಳಿ: ಎನ್‌ಐಎ ತನಿಖೆಯಲ್ಲಿ ಮಹತ್ವದ ಬೆಳವಣಿಗೆ

ಪಾರ್ಟಿ ಮಾಡುತ್ತಿದ್ದಾಗ ಪೊಲೀಸರ ಎಂಟ್ರಿ, ಹೆದರಿ ನಾಲ್ಕನೇ ಫ್ಲೋರ್‌ನಿಂದ ಹಾರಿದ್ರಾ ಯುವತಿ

ಮಹಿಳೆಯರಿರುವುದು ಗಂಡನ ಜತೆ ಮಲಗುವುದಕ್ಕೆ: ಕೇರಳ ಸಿಪಿಎಂ ಮುಖಂಡನ ವಿವಾದಾತ್ಮಕ ಹೇಳಿಕೆ

ಮೊಟ್ಟೆ ಪ್ರಿಯರೇ ಹುಷಾರ್ : ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಶಾಕಿಂಗ್ ಮಾಹಿತಿ

ಕೌಟುಂಬಿಕ ಕಲಹಕ್ಕೆ ಪತ್ನಿಯನ್ನು ಮುಗಿಸಿ, ತಾನೂ ಆತ್ಮಹತ್ಯೆಗೆ ಶರಣಾದ ಪತಿ

ಮುಂದಿನ ಸುದ್ದಿ
Show comments