ನವದೆಹಲಿ: 2020-21 ನೇ ಸಾಲಿನ ಪ್ರತಿಷ್ಠಿತ ಪದ್ಮ ಪ್ರಶಸ್ತಿಗೆ ಸೂಕ್ತ ಸಾಧಕರನ್ನು ಆಯ್ಕೆ ಮಾಡಲು ಪ್ರಧಾನಿ ಮೋದಿ ದೇಶದ ಜನತೆಗೇ ಆಹ್ವಾನ ನೀಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ನಿಮ್ಮ ಊರಿನಲ್ಲಿ, ನಿಮ್ಮ ಸುತ್ತಮುತ್ತ ವಿಶೇಷ ಸಾಧನೆ ಮಾಡಿದವರು, ಎಲೆಮರೆಕಾಯಿಗಳಂತೆ ಸೇವೆ ಮಾಡುತ್ತಿರುವವರು ಯಾರಾದರೂ ಇದ್ದಲ್ಲಿ ಅಂತಹ ಮಹಾನ್ ಸಾಧಕರ ವಿವರಗಳನ್ನು http://padmaawards.gov.in/ ವೆಬ್ ಸೈಟ್ ಗೆ ಭೇಟಿ ನೀಡಿ ಸೆ.15 ರೊಳಗಾಗಿ ಮಾಹಿತಿ ಕೊಡಿ ಎಂದಿದ್ದಾರೆ.
ಈ ಮೂಲಕ ಇದುವರೆಗೆ ಕೇವಲ ಸಮಿತಿಯೊಂದು ನಡೆಸುತ್ತಿದ್ದ ಆಯ್ಕೆ ಪ್ರಕ್ರಿಯೆಯಲ್ಲಿ ಜನ ಸಾಮಾನ್ಯರೂ ಭಾಗಿಯಾಗಲು ಅವಕಾಶ ನೀಡಿದ್ದಾರೆ. ಎಷ್ಟೋ ಜನಕ್ಕೆ ಸ್ಪೂರ್ತಿಯಾಗಿ ಬದುಕುವ ಎಷ್ಟೋ ಮಹನೀಯರಿದ್ದಾರೆ. ಅಂತಹವರನ್ನು ಗುರುತಿಸಿ ದೇಶದ ಉನ್ನತ ಗೌರವ ನೀಡಲು ಪ್ರಧಾನಿ ಮೋದಿ ಇಂತಹದ್ದೊಂದು ಆಹ್ವಾನ ನೀಡಿದ್ದಾರೆ.