Select Your Language

Notifications

webdunia
webdunia
webdunia
webdunia

2 ವರ್ಷದ ಲೆಕ್ಕ ಕೊಟ್ಟು, ಆಶೀರ್ವಾದ ಪಡೆಯಲು ಬಂದಿದ್ದೇನೆ: ಪ್ರಧಾನಿ ಮೋದಿ

2 ವರ್ಷದ ಲೆಕ್ಕ ಕೊಟ್ಟು, ಆಶೀರ್ವಾದ ಪಡೆಯಲು ಬಂದಿದ್ದೇನೆ: ಪ್ರಧಾನಿ ಮೋದಿ
ದಾವಣಗೆರೆ , ಭಾನುವಾರ, 29 ಮೇ 2016 (17:53 IST)
ದೇಶದ ಜನತೆ ಎಲ್ಲವನ್ನು ಅಳೆದು ತೂಗಿಯೇ ಬಿಜೆಪಿ ಸರಕಾರವನ್ನು ಕೇಂದ್ರದಲ್ಲಿ ಅಧಿಕಾರಕ್ಕೆ ತಂದಿದ್ದಾರೆ. ನಾನು ಮಾತು ಕೊಟ್ಟಂತೆ ನಿಮ್ಮ ನಗರಕ್ಕೆ ಅಭಿವೃದ್ಧಿಯ ಯೋಜನೆಗಳನ್ನು ನೀಡಿದ್ದೇನೆ. ನಿಮ್ಮ ಸಹಕಾರವಿದ್ದರೆ ನನಗೆ ನನ್ನ ಕೆಲಸದಲ್ಲಿ ಯಾವುದೇ ಕಷ್ಟ ಕಾಣಿಸುವುದಿಲ್ಲ ಎಂದು ದಾವಣಗೆರೆಯಲ್ಲಿ ಬಿಜೆಪಿಯ ವಿಕಾಸ ಪರ್ವ ಸಮಾವೇಶದಲ್ಲಿ ಪ್ರಧಾನಿ ಮೋದಿ ಘೋಷಿಸಿದರು.
 
ಮೊದಲ ಉದ್ದೇಶ ನನ್ನ ಕೆಲಸದ ಬಗ್ಗೆ ನಿಮಗೆ ಲೆಕ್ಕ ಕೊಡುವುದು. ಚುನಾವಣೆ ಸಂದರ್ಭದಲ್ಲಿ ನನಗೆ ಕಮಲ ಕೊಡಿ ನಾನು ನಿಮಗೆ ಅಭಿವೃದ್ಧಿ ಕೊಡುತ್ತೇನೆ ಎಂದು ಹೇಳಿದ್ದೆ. ಅದರಂತೆ, ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುತ್ತಿದ್ದೇನೆ ಎಂದರು.
 
ನಾನು ನಿಮ್ಮ ನಗರಕ್ಕೆ ಎರಡನೇ ಬಾರಿ ಭೇಟಿ ನೀಡಿದ್ದೇನೆ. ಎರಡು ವರ್ಷದ ಕಡಿಮೆ ಅವಧಿಯಲ್ಲಿ ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದ್ದೇನೆ, 60 ವರ್ಷಗಳಲ್ಲಿ ಆಗದಿರುವ ಕಾರ್ಯಗಳನ್ನು ಕೇವಲ ಎರಡೇ ವರ್ಷಗಳಲ್ಲಿ ಮಾಡಿ ಮುಗಿಸಿದ್ದೇನೆ ಎಂದರು.
 
ರೈತರಿಗೆ ನಮ್ಮ ಸರಕಾರ ಕೊಟ್ಟಷ್ಟು ಬಜೆಟ್ ಯಾವ ಸರಕಾರವು ಕೊಟ್ಟಿಲ್ಲ, ನೀರಿನ ಸಮಸ್ಯೆಗಳನ್ನು ಪರಿಹರಿಸುವಂತೆ ಸೂಚನೆ ನೀಡಿದ್ದೇನೆ. ಪ್ರಧಾನಿ ದೊಡ್ಡ ದೊಡ್ಡ ಯೋಜನೆ ತರಲ್ಲ ಎಂದು ವಿಪಕ್ಷಗಳು ಆರೋಪಿಸುತ್ತಿವೆ. ದೊಡ್ಡ ದೊಡ್ಡ ಯೋಜನೆಯಿಂದ ದೊಡ್ಡ ದೊಡ್ಡ ಹಗರಣಗಳು ನಡೆದಿವೆ. ನಾನು ಅಂತಹ ಪಾಪ ಮಾಡಬೇಕೆ ಎಂದು ಪ್ರಶ್ನಿಸಿದರು.
 
ಕಬ್ಬು ಬೆಳೆಗಾರರ ನೆರವಿಗೆ ನಮ್ಮ ಸರಕಾರ ಬಂದಿದೆ. ನೇರವಾಗಿ ರೈತರ ಖಾತೆಗಳಿಗೆ ಹಣ ಸೇರುವಂತೆ ಮಾಡಿದ್ದೇನೆ. ಪ್ರತಿ ಬೇಸಿಗೆಯಲ್ಲೂ ಬರಗಾಲ ಕಾಡುತ್ತಿದೆ. ಮುಂಬರುವ ದಿನಗಳಲ್ಲಿ ಪರಿಹಾರ ಕಂಡುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
 
ಅನವಶ್ಯಕ ಕಾನೂನುಗಳಿಗೆ ಮುಕ್ತಿ ನೀಡಿದ್ದೇವೆ. ಉದ್ಯಮಿಗಳಿಗಾಗಿ ಹಲವಾರು ರೀತಿಯಲ್ಲಿ ಆರ್ಥಿಕ ಸುಧಾರಣೆಗಳನ್ನು ಜಾರಿಗೆ ತಂದಿದ್ದೇವೆ ಎಂದರು.   ಹುಬ್ಬಳ್ಳಿಯಿಂದ ದಾವಣೆಗೆರೆಗೆ ಹೆಲಿಕಾಪ್ಟರ್‌ನಿಂದ ಬಂದಿಳಿದ ಪ್ರಧಾನಿ ನರೇಂದ್ರ ಮೋದಿಗೆ ಸ್ಮರಣ ಕಾಣಿಕೆ ನೀಡಿ ಸನ್ಮಾನಿಸಲಾಯಿತು.

ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.

Share this Story:

Follow Webdunia kannada

ಮುಂದಿನ ಸುದ್ದಿ

ಉತ್ತರಪ್ರದೇಶ: ರಾಜನಾಥ್ ಸಿಂಗ್ ಬಿಜೆಪಿಯ ಸಿಎಂ ಅಭ್ಯರ್ಥಿ?