ಎರ್ನಾಕುಲಂ- ಬೆಂಗಳೂರು ಸೇರಿ 4 ಹೊಸ ವಂದೇ ಭಾರತ್ ರೈಲುಗಳಿಗೆ ಪ್ರಧಾನಿ ಮೋದಿ ಗ್ರೀನ್‌ಸಿಗ್ನಲ್‌

Sampriya
ಶನಿವಾರ, 8 ನವೆಂಬರ್ 2025 (15:45 IST)
Photo Credit X
ವಾರಣಾಸಿ: ಎರ್ನಾಕುಲಂ- ಬೆಂಗಳೂರು ಸೇರಿದಂತೆ  ನಾಲ್ಕು ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಲೋಕಸಭಾ ಕ್ಷೇತ್ರ ವಾರಣಾಸಿಯಿಂದ ಇಂದು ಹಸಿರು ನಿಶಾನೆ ತೋರಿಸಿದ್ದಾರೆ. 

ಬನಾರಸ್‌ನಿಂದ ಖಜುರಾಹೊ, ಲಕ್ನೋದಿಂದ ಸಹಾರನ್‌ಪುರ, ಫಿರೋಜ್‌ಪುರದಿಂದ ದೆಹಲಿ ಮತ್ತು ಎರ್ನಾಕುಲಂನಿಂದ ಬೆಂಗಳೂರು ಮಾರ್ಗಗಳಲ್ಲಿ ಸಂಚರಿಸುವ ನಾಲ್ಕು ಹೊಸ ವಂದೇ ಭಾರತ್ ರೈಲುಗಳಿಗೆ ಹಸಿರು ನಿಶಾನೆ ತೋರಿದ್ದಾರೆ.  ಭಾರತದಲ್ಲಿ ಪ್ರಮುಖ ಸಾರಿಗೆ ವ್ಯವಸ್ಥೆಯಾಗಿರುವ ರೈಲ್ವೇ ವಿಭಾಗಕ್ಕೆ ಇದೀಗ ನಾಲ್ಕು ಹೊಸ ವಂದೇ ಭಾರತ್​ ಎಕ್ಸ್​ಪ್ರೆಸ್​​ ರೈಲು ಸೇರ್ಪಡೆಯಾಗಿದೆ. 

ಎರ್ನಾಕುಲಂ-ಕೆಎಸ್‌ಆರ್ ಬೆಂಗಳೂರು ವಂದೇ ಭಾರತ್ ಸೇವೆಯು ಕೇರಳ, ತಮಿಳುನಾಡು ಮತ್ತು ಕರ್ನಾಟಕವನ್ನು ಸಂಪರ್ಕಿಸುವ ದಕ್ಷಿಣ ರೈಲ್ವೆಯ ಮೊದಲ ಅಂತರರಾಜ್ಯ ಅರೆಹೈ ಸ್ಪೀಡ್ ಪ್ರೀಮಿಯಂ ಸೇವೆಯಾಗಿದೆ.

ಈ ರೈಲು ಕೇರಳ ಮತ್ತು ತಮಿಳುನಾಡಿನಾದ್ಯಂತದ ಪ್ರಮುಖ ನಗರಗಳಾದ ತ್ರಿಶೂರ್, ಪಾಲಕ್ಕಾಡ್, ಕೊಯಮತ್ತೂರು, ತಿರುಪ್ಪೂರು, ಈರೋಡ್ ಮತ್ತು ಸೇಲಂ ಮೂಲಕ ಹಾದುಹೋಗುತ್ತದೆ, ನಂತರ ಕೃಷ್ಣರಾಜಪುರಂ ಮತ್ತು ಕೆಎಸ್ಆರ್ ಬೆಂಗಳೂರು ತಲುಪುತ್ತದೆ. ಚೇರ್ ಕಾರ್ ಸೀಟುಗಳ ಬೆಲೆ ₹1,095 ಆಗಿದ್ದರೆ, ಎಕ್ಸಿಕ್ಯೂಟಿವ್ ಕ್ಲಾಸ್ ಸೀಟುಗಳ ಬೆಲೆ ₹2,289 ಮೂರು ರಾಜ್ಯಗಳ ನಡುವಿನ ಹೊಸ ಸಂಪರ್ಕವು ವ್ಯವಹಾರ ಮತ್ತು ಪ್ರವಾಸೋದ್ಯಮವನ್ನು ಉತ್ತೇಜಿಸುತ್ತದೆ.

ಎರ್ನಾಕುಲಂನಿಂದ ಬೆಂಗಳೂರಿಗೆ ಸಂಪರ್ಕಿಸುವ ವಂದೇ ಭಾರತ್ ರೈಲು ಎರಡು ಗಂಟೆ ಸಮಯವನ್ನು ಉಳಿತಾಯ ಮಾಡುತ್ತದೆ. ಇದು ಎಂಟು ಗಂಟೆ 40 ನಿಮಿಷಗಳಲ್ಲಿ ಪ್ರಯಾಣವನ್ನು ಪೂರ್ಣಗೊಳಿಸುತ್ತದೆ. ಪ್ರಮುಖ ಐಟಿ ಮತ್ತು ವಾಣಿಜ್ಯ ಕೇಂದ್ರಗಳನ್ನು ಸಂಪರ್ಕಿಸುವ ಈ ರೈಲು ಮಾರ್ಗವು ಕೇರಳ, ತಮಿಳುನಾಡು, ಕರ್ನಾಟಕ ನಡುವೆ ಆರ್ಥಿಕ ಚಟುವಟಿಕೆ ಮತ್ತು ಪ್ರವಾಸೋದ್ಯಮವನ್ನು ಉತ್ತೇಜಿಸಲಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕೆಲಸ ಮಾಡುವವರಿಗಿಂತ, ಚಾಡಿ ಹೇಳುವವರೆ ಕುಮಾರಸ್ವಾಮಿಗೆ ಪ್ರಿಯ: ಜಿಟಿ ದೇವೇಗೌಡ

ಹಿಂದೂ ವಿರೋಧಿ ಹೇಳಿಕೆ, ಇದೆಲ್ಲ ಅವರುಗಳ ಸೃಷ್ಟಿ: ಮಾಜಿ ಸಚಿವ ಆಂಜನೇಯ ಸ್ಪಷ್ಟನೆ

ದೆಹಲಿ ಸ್ಪೋಟ ಪ್ರಕರಣ: ರೈಲು, ವಿಮಾನ ಪ್ರಯಾಣಿಕರಿಗೆ ಸಲಹೆ ಕೊಟ್ಟ ದೆಹಲಿ ಪೊಲೀಸರು

Delhi Blast: ಪುಲ್ವಾಮಾ ದಾಳಿಯ ಮಾಸ್ಟರ್‌ಮೈಂಡ್‌ನ ಪತ್ನಿಯೊಂದಿಗೆ ಶಾಹೀನ ಲಿಂಕ್

ಕಾಂಗ್ರೆಸ್‌ನ ಗ್ಯಾರಂಟಿ ಯೋಜನೆ ರೈತರ ಬದುಕನ್ನು ಕಷ್ಟವಾಗಿಸಿದೆ: ಪ್ರಹ್ಲಾದ್ ಜೋಶಿ

ಮುಂದಿನ ಸುದ್ದಿ
Show comments