ನವದೆಹಲಿ: ಪ್ರಧಾನಿ ಮೋದಿ ನವರಾತ್ರಿ ಉಪವಾಸ ಮಾಡುತ್ತಿದ್ದಾರೆ. ಉಪವಾಸವೆಂದರೆ ಕೇವಲ ಬಿಸಿ ನೀರು ಮತ್ತು ಹಾಲು ಅಥವಾ ಜ್ಯೂಸ್.. ಒಂಭತ್ತು ದಿನಗಳ ಕಾಲ ಅವರ ಆಹಾರ ಇಷ್ಟೇ. ಹಾಗಿದ್ದರೂ, ಬಿಡುವಿಲ್ಲದ ಕಾರ್ಯಕ್ರಮದ ಪಟ್ಟಿ ಅವರ ಮುಂದಿದೆ.
ಭಾನುವಾರದಿಂದ ಒಂದು ವಾರ ಕಾಲವೂ ಬಿಡುವಿಲ್ಲದ ದಿನಚರಿ ಅವರದಾಗಿರಲಿದೆ. ನಾಳೆ ದೇಶದ ಅತೀ ದೊಡ್ಡಸುರಂಗ ಮಾರ್ಗವನ್ನು ಲೋಕಾರ್ಪಣೆ ಮಾಡಲಿದ್ದಾರೆ. ಜಮ್ಮು ಮತ್ತು ಶ್ರೀನಗರ ಸಂಪರ್ಕಿಸುವ ಸುರಂಗ ಮಾರ್ಗ ಇದಾಗಲಿದೆ.
ಚಳಿಗಾಲದಲ್ಲಿ ಬರುವ ನವರಾತ್ರಿ ಮತ್ತು ಈ ನವರಾತ್ರಿ ಸೇರಿ ವರ್ಷಕ್ಕೆ ಎರಡು ಬಾರಿ ಪ್ರಧಾನಿ ಮೋದಿ 9 ದಿನಗಳ ಉಪವಾಸ ವ್ರತ ಆಚರಿಸುತ್ತಾರೆ. ಹಾಗಿದ್ದರೂ, ತಮ್ಮ ಎಂದಿನ ಕಾರ್ಯಕ್ರಮಗಳಿಗೆ ಮಾತ್ರ ಅಡ್ಡಿ ಮಾಡಿಕೊಳ್ಳುವುದಿಲ್ಲ. ಹಲವು ಸಂವಾದ ಕಾರ್ಯಕ್ರಮಗಳಲ್ಲೂ ಪಾಲ್ಗೊಳ್ಳಲಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ