Select Your Language

Notifications

webdunia
webdunia
webdunia
webdunia

ದೇಶದ ಬಹುತೇಕ ಮಾಧ್ಯಮಗಳು ಮೋದಿ ವಶದಲ್ಲಿವೆ; ಕೇಜ್ರಿವಾಲ್ ವಾಗ್ದಾಳಿ

ದೇಶದ ಬಹುತೇಕ ಮಾಧ್ಯಮಗಳು ಮೋದಿ ವಶದಲ್ಲಿವೆ; ಕೇಜ್ರಿವಾಲ್ ವಾಗ್ದಾಳಿ
ನವದೆಹಲಿ , ಶನಿವಾರ, 28 ಮೇ 2016 (18:31 IST)
ದೇಶದ ಬಹುತೇಕ ಮಾಧ್ಯಮಗಳನ್ನು ಪ್ರಧಾನಿ ಮೋದಿ ನಿಯಂತ್ರಿಸುತ್ತಿದ್ದಾರೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಾಗ್ದಾಳಿ ನಡೆಸಿದ್ದಾರೆ.
 
ರಾಣಾ ಅಯ್ಯೂಬ್ ಬರೆದ ಗುಜರಾತ್ ಫೈಲ್ಸ್ ಪುಸ್ತಕ ಬಿಡುಗಡೆ ಸಮಾರಂಭದ ಸುದ್ದಿಗೆ ಪ್ರಚಾರ ನೀಡಲು ಪ್ರಮುಖ ಮಾಧ್ಯಮಗಳು ಉದ್ದೇಶಪೂರ್ವಕವಾಗಿ ಗೈರುಹಾಜರಾಗಿದ್ದವು ಎಂದು ಟೀಕಿಸಿದ್ದಾರೆ.
 
ಮೋದಿಯನ್ನು ವಿರೋಧಿಸುವ ಯಾವುದೇ ಕಾರ್ಯಕ್ರಮಗಳಿಗೆ ಮಾಧ್ಯಮಗಳು ಪ್ರಚಾರ ನೀಡದಿರುವುದೇ ಮೋದಿ ಆಯಾ ಚಾನೆಲ್‌ಗಳ ಮಾಲೀಕರೊಂದಿಗೆ ಹೊಂದಿರುವ ರಹಸ್ಯ ಸಂಬಂಧವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.
 
ಖ್ಯಾತ ಪತ್ರಕರ್ತ ರಾಣಾ ಅಯ್ಯೂಬ್ 2001 ರಿಂದ 2010ರವರೆಗೆ ಪ್ರಮುಖ ಹುದ್ದೆಯಲ್ಲಿರುವ ಅಧಿಕಾರಿಗಳನ್ನು ಭೇಟಿ ಮಾಡಿ ಗುಜರಾತ್ ದಂಗೆಯಲ್ಲಿ ಅಧಿಕಾರಿಗಳು ಯಾವ ರೀತಿ ಭಾಗಿಯಾಗಿದ್ದರು ಎನ್ನುವ ಬಗ್ಗೆ ಗುಜರಾತ್ ಫೈಲ್ಸ್ ಪುಸ್ತಕದಲ್ಲಿ ಬಹಿರಂಗಗೊಳಿಸಿದ್ದಾರೆ.
 
ಗುಜರಾತ್ ಫೈಲ್ಸ್ ಪುಸ್ತಕದಲ್ಲಿ ಅಂದಿನ ಮುಖ್ಯಮಂತ್ರಿ ನರೇಂದ್ರ ಮೋದಿ ಅಧಿಕಾರವಧಿಯಲ್ಲಿ ನಕಲಿ ಎನ್‌ಕೌಂಟರ್‌ಗಳು ಯಾವ ರೀತಿ ನಡೆದಿವೆ ಎನ್ನುವುದರ ಬಗ್ಗೆ ಬೆಳಕು ಚೆಲ್ಲುತ್ತದೆ.

ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.

Share this Story:

Follow Webdunia kannada

ಮುಂದಿನ ಸುದ್ದಿ

ನಮೋ ಟೀ ಸ್ಟಾಲ್‌ಗೆ ವಿರುದ್ಧವಾಗಿ ಶಿವಸೇನೆಯ ಶಿವಾ ವಡಾ ಪಾವ್