Select Your Language

Notifications

webdunia
webdunia
webdunia
webdunia

ಸೈಲೆಂಟ್ ಪ್ರಧಾನಿ ಮನಮೋಹನ್ ಸಿಂಗ್ ಇಂಟ್ರೆಸ್ಟಿಂಗ್ ಲವ್ ಸ್ಟೋರಿ

Dr Manamohan Singh wife

Krishnaveni K

ನವದೆಹಲಿ , ಶನಿವಾರ, 28 ಡಿಸೆಂಬರ್ 2024 (09:05 IST)
Photo Credit: X
ನವದೆಹಲಿ: ಸ್ವಭಾವತಃ ಮೌನಿ ಎಂದೇ ಹೆಸರುವಾಸಿಯಾಗಿದ್ದ ಡಾ ಮನಮೊಹನ್ ಸಿಂಗ್ ವೈಯಕ್ತಿಕ ಜೀವನದಲ್ಲಿ ಪ್ರೀತಿಸಿದ ಹುಡುಗಿಯನ್ನೇ ಹಠಕ್ಕೆ ಬಿದ್ದು ಮದುವೆಯಾಗಿದ್ದರು. ಅವರ ಪತ್ನಿ ಗುರುಶರಣ್ ಕೌರ್ ಜೊತೆಗಿನ ಲವ್ ಸ್ಟೋರಿ ಈಗ ವೈರಲ್ ಆಗಿದೆ.

ಮನಮೋಹನ್ ಸಿಂಗ್ ದೇಶ ಕಂಡ ಅತ್ಯಂತ ಸುಶಿಕ್ಷಿತ ಪ್ರಧಾನಿ. ಅರ್ಥಶಾಸ್ತ್ರದಲ್ಲಿ ವಿದೇಶೀ ವಿವಿಗಳಲ್ಲಿ ಓದಿ ಡಾಕ್ಟರೇಟ್ ಪಡೆದ ಮೇಧಾವಿ. ರಾಜಕೀಯವಾಗಿ ಅತಿಯಾಗಿ ಮಾತನಾಡುವವರಲ್ಲ, ಟೀಕೆ ಮಾಡುವುದೂ ಅಪರೂಪ.

ಆದರೆ ವೈಯಕ್ತಿಕ ಜೀವನದಲ್ಲಿ ತಾವು ಪ್ರಿತಿಸಿದ ಹುಡುಗಿಯೇ ಬೇಕು ಎಂದು ಹಠಕ್ಕೆ ಬಿದ್ದು ಮದುವೆಯಾಗಿದ್ದರಂತೆ. ಕೇಂಬ್ರಿಡ್ಜ್ ನಲ್ಲಿ ಶಿಕ್ಷಣ ಪಡೆದ ಮನಮೋಹನ್ ಸಿಂಗ್ ಮೊದಲ ನೋಟದಲ್ಲೇ ಗುರುಶರಣ್ ಪ್ರೀತಿಗೆ ಬಿದ್ದಿದ್ದರಂತೆ. 1957 ರಲ್ಲಿ ಶಿಕ್ಷಣ ಮುಗಿಸಿ ಭಾರತಕ್ಕೆ ಬಂದಾಗ ಮನೆಯವರು ಹುಡುಗಿ ಹುಡುಕಲು ಪ್ರಾರಂಭಿಸಿದ್ದರು.

ಆದರೆ ನನಗೆ ಶ್ರೀಮಂತ ಹುಡುಗಿ ಬೇಡ, ವಿದ್ಯಾವಂತ ಹುಡುಗಿ ಬೇಕು ಎಂದು ಮನಮೋಹನ್ ಸಿಂಗ್ ಆಗಲೇ ಬೇಡಿಕೆಯಿಟ್ಟಿದ್ದರಂತೆ. ಕೊನೆಗೆ ಇತಿಹಾಸ ಪ್ರಾದ್ಯಾಪಕಿ, ಬರಹಗಾರ್ತಿ, ಚಿಂತಕಿ ಗುರುಶರಣ್ ಅವರನ್ನು ಪ್ರೀತಿಸಿ ಮದುವೆಯಾದರು. ಜೀವನದ ಕೊನೆಯವರೆಗೂ ಗುರುಶರಣ್ ಪತಿಗೆ ಬೆಂಬಲವಾಗಿ ನಿಂತರು.

Share this Story:

Follow Webdunia kannada

ಮುಂದಿನ ಸುದ್ದಿ

ಕರ್ನಾಟಕದಲ್ಲಿ ಇನ್ನೆಷ್ಟು ದಿನ ಮಳೆ: ಹವಾಮಾನ ವರದಿ ಇಲ್ಲಿದೆ