Publish Date: Sat, 04 Feb 2017 (12:56 IST)
Updated Date: Sat, 04 Feb 2017 (13:03 IST)
ಪಣಜಿ: ಗೋವಾದಲ್ಲಿಂದು ವಿಧಾನಸಭೆ ಚುನಾವಣೆ ನಡೆಯುತ್ತಿದೆ. ಆಯ್ದ 40 ಬೂತ್`ಗಳಲ್ಲಿ ಮೊದಲ ಬಾರಿಗೆ ಮತದಾನ ಮಾಡುತ್ತಿರುವ ಬಹಳಷ್ಟು ಮಹಿಳಾ ಮತದಾರರಿದ್ದಾರೆ. ಮಹಿಳಾ ಮತದಾರರನ್ನ ಸೆಳೆಯಲು ಚುನಾವಣಾ ಅಯೋಗ ಹೊಸ ದಾರಿ ಹುಡುಕಿದೆ. ಮೊದಲ ಬಾರಿಗೆ ಮತ ಹಾಕಲು ಮಹಿಳಾ ಮತದಾರರಿಗೆ ಪಿಂಕ್ ಟೆಡ್ಡಿ ಬಿಯರ್ ನೀಡಲಾಗುತ್ತಿದೆ.
ಅಷ್ಟೇ ಅಲ್ಲ, ಮತಕೇಂದ್ರಗಳನ್ನ ಪಿಂಕ್ ಬಲೂನ್, ಪಿಂಕ್ ಟೇಬಲ್, ಪಿಂಕ್ ವಾಲ್ ಮೂಲಕ ವಿಶಿಷ್ಟವಾಗಿ ಅಲಂಕರಿಸಲಾಗಿದ್ದು, ಅಲ್ಲಿನ ಸಿಬ್ಬಂದಿ ಸಹ ಪಿಂಕ್ ಉಡುಪನ್ನೇ ಧರಿಸಿದ್ದಾರೆ.
`ಆಯ್ದ 40 ಬೂತ್`ಗಳ ಮೊದಲ ಮತದಾರರಿಗೆ ಟೆಡ್ಡಿ ಬಿಯರ್ ನೀಡಲಾಗುತ್ತಿದ್ದು, 1000 ಟೆಡ್ಡಿ ಬಿಯರ್ ಆರ್ಡರ್ ಮಾಡಿರುವುದಾಗಿ ಮುಖ್ಯಚುನಾವಣಾಧಿಕಾರಿ ಕುನಾಲ್ ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ