ಪರಯ್ಪೊರಾ ಪ್ರದೇಶದಲ್ಲಿರುವ ಜಮ್ಮು ಮತ್ತು ಕಾಶ್ಮೀರದ ಶಿಕ್ಷಣ ಸಚಿವ ನಯೀಮ್ ಅಕ್ತರ್ ಅವರ ನಿವಾಸದ ಮೇಲೆ ಸೋಮವಾರ ತಡ ರಾತ್ರಿ ಪೊಲೀಸರು ರಾತ್ರಿ ದುಷ್ಕರ್ವಿುಗಳು ಪೆಟ್ರೋಲ್ ಬಾಂಬ್ ದಾಳಿ ನಡೆಸಿದ್ದಾರೆ.
ಅಪರಿಚಿತ ವ್ಯಕ್ತಿಗಳು ಈ ಕೃತ್ಯವನ್ನೆಸಗಿದ್ದು ಅದೃಷ್ಟವಶಾತ್ ಘಟನೆಯಲ್ಲಿ ಯಾರಿಗೂ ಅಪಾಯವಾಗಿಲ್ಲ.
ದಾಳಿಯಿಂದ ಮನೆಯ ಮುಖ್ಯದ್ವಾರಕ್ಕೆ ಸ್ವಲ್ಪ ಹಾನಿಯಾಗಿದ್ದು, ಘಟನೆ ನಡೆದ ಸಂದರ್ಭದಲ್ಲಿ ಅಖ್ತರ್ ಮತ್ತು ಅವರು ಪತ್ನಿ ಮನೆಯಲ್ಲಿರಲಿಲ್ಲ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ವರ್ಷ ಮಾರ್ಚ್ನಲ್ಲಿ ಪಿಡಿಪಿ ಮತ್ತು ಬಿಜೆಪಿ ಮೈತ್ರಿ ಸರ್ಕಾರ ಅಸ್ಥಿತ್ವಕ್ಕೆ ಬಂದ ನಂತರ ಅಕ್ತರ್ ಕುಟುಂಬ ಅತ್ಯುನ್ನತ ಭದ್ರತೆಯ ಗುಪ್ಕರ್ ರೋಡ್ನಲ್ಲಿರುವ ನಿವಾಸಕ್ಕೆ ಸ್ಥಳಾಂತರಗೊಂಡಿದ್ದಾರೆ.
ಅಖ್ತರ್ ನಿವಾಸವಷ್ಟೇ ಅಲ್ಲ ಬೇಮನಿಯಾ ಪ್ರದೇಶದ ಎಸ್‌ಡಿಎ ಕಾಲೋನಿಯಲ್ಲಿರುವ ಕೆಲವೊಂದು ಕಚೇರಿಗಳು ಮತ್ತು ಸರ್ಕಾರಿ ಕಟ್ಟಡಗಳ ಮೇಲೂ ಸಹ ನಿನ್ನೆ ರಾತ್ರಿ ಪೆಟ್ರೋಲ್ ಬಾಂಬ್ ದಾಳಿ ನಡೆಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.ಆದರೆ ಯಾರಿಗೂ ಅಪಾಯವಾಗಿಲ್ಲ ಎಂದು ತಿಳಿದು ಬಂದಿದೆ.