ಡಿಸ್ಕವರಿ ಚಾನೆಲ್ ನಲ್ಲಿ ಪ್ರಧಾನಿ ಮೋದಿ ನೋಡಿ ಜನ ಏನೇನು ಕಾಮೆಂಟ್ ಮಾಡಿದ್ರು ಗೊತ್ತಾ?!

Webdunia
ಮಂಗಳವಾರ, 30 ಜುಲೈ 2019 (09:14 IST)
ನವದೆಹಲಿ: ಡಿಸ್ಕವರಿ ಚಾನೆಲ್ ನ ಮ್ಯಾನ್ ವರ್ಸಸ್‍ ವೈಲ್ಡ್ ಲೈಫ್ ಕಾರ್ಯಕ್ರಮ ಸರಣಿಯಲ್ಲಿ ಪ್ರಧಾನಿ ಮೋದಿ ಕಾಣಿಸಿಕೊಳ್ಳುತ್ತಿದ್ದಾರೆಂಬ ಸುದ್ದಿ ತಿಳಿದು ಸಾವಿರಾರು ಮಂದಿ ಸೋಷಿಯಲ್ ಮೀಡಿಯಾದಲ್ಲಿ ಹಲವು ರೀತಿಯ ಕಾಮೆಂಟ್ ಮಾಡಿದ್ದಾರೆ.


ಬಿಯರ್ ಗ್ರಿಲ್ಸ್ ತಮ್ಮ ಕಾರ್ಯಕ್ರಮದ ಬಗ್ಗೆ ಟ್ವಿಟರ್ ನಲ್ಲಿ ಮಾಹಿತಿ ನೀಡುತ್ತಿದ್ದಂತೇ ಕೆಲವರು ಮೋದಿ ಸಾಹಸವನ್ನು ಕೊಂಡಾಡಿದರೆ, ಕೆಲವರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ಲೇವಡಿ ಮಾಡಿದ್ದಾರೆ. ಮತ್ತಷ್ಟು ಜನ ಟೀಕೆಯನ್ನೂ ಮಾಡಿದ್ದಾರೆ.

ಈ ರೀತಿ ಕಾಡು ಮೇಡಿನಲ್ಲಿ ಇಷ್ಟು ಫಿಟ್ ಆಗಿ ಸುತ್ತುವ ಪ್ರಧಾನಿಯನ್ನು ಭಾರತ ಇದುವರೆಗೆ ಕಂಡಿರಲಿಲ್ಲ ಎಂದು ಕೆಲವರು ಅಚ್ಚರಿ ವ್ಯಕ್ತಪಡಿಸಿದರೆ, ಮೋದಿ ಎಂದರೆ ಹೀಗೇ ಚಮಕ್ ಕೊಡುತ್ತಾ ಎಲ್ಲರನ್ನೂ ಅಚ್ಚರಿಯನ್ನು ಕೆಡವುತ್ತಾರೆ ಎಂದಿದ್ದಾರೆ. ಹಲವು ಸೆಲೆಬ್ರಿಟಿಗಳೂ ಮೋದಿ ಸಾಹಸವನ್ನು ಮೆಚ್ಚಿಕೊಂಡಿದ್ದಾರೆ.

ಈ ಕಾರ್ಯಕ್ರಮದ ಚಿತ್ರೀಕರಣ ನಡೆದಿದ್ದು ಉತ್ತರಾಖಂಡದಲ್ಲಿ ಮೊನ್ನೆ ಜನವರಿ ತಿಂಗಳಲ್ಲಿ. ಅದೇ ತಿಂಗಳಲ್ಲಿ ಪುಲ್ವಾಮಾದಲ್ಲಿ ಸೈನಿಕರ ಮೇಲೆ ದಾಳಿ ನಡೆದಿದ್ದು. ಇದೇ ಕಾರಣಕ್ಕೆ ಕೆಲವರು ಮೋದಿಯನ್ನು ಟೀಕಿಸಿದ್ದಾರೆ. ಪುಲ್ವಾಮಾದಲ್ಲಿ ಸೈನಿಕರು ಹುತಾತ್ಮರಾಗುತ್ತಿದ್ದಾಗ ಮೋದಿ ಇಲ್ಲಿ ವೈಲ್ಡ್ ಲೈಫ್ ನಲ್ಲಿ ಶೂಟಿಂಗ್ ಮಾಡುತ್ತಿದ್ದರು ಎಂದು ಕೆಲವರು ಟೀಕಿಸಿದ್ದಾರೆ.

ಇನ್ನು, ಮೋದಿ ಸಾಹಸವನ್ನು ಮೆಮೆಗಳ ಮೂಲಕ ತಮಾಷೆ ಮಾಡಿದವರೂ ಇದ್ದಾರೆ. ಮತ್ತೆ ಕೆಲವರು ಹೆಂಡತಿ, ಮಕ್ಕಳು ಇಲ್ಲದೇ ಹೋದರೆ ಜನ ಈ ರೀತಿ ಸಾಹಸಕ್ಕೆ ಕೈ ಹಾಕಲು ಹಿಂಜರಿಯಲ್ಲ ಎಂದು ಲೈಟಾಗಿ ಪ್ರಧಾನಿ ಮೋದಿ ಕಾಲೆಳೆದಿದ್ದಾರೆ. ಅಂತೂ ಆಗಸ್ಟ್ 12 ರಂದು ಡಿಸ್ಕವರಿ ಚಾನೆಲ್ ನಲ್ಲಿ ಪ್ರಸಾರವಾಗಲಿರುವ ಈ ಕಾರ್ಯಕ್ರಮದ ಬಗ್ಗೆ ಹೈಪ್ ಕ್ರಿಯೇಟ್ ಆಗಿರುವುದಂತೂ ಸುಳ್ಳಲ್ಲ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಅನ್ನದಾತರ ಜೊತೆ ಜನ್ಮದಿನ ಯಾವತ್ತೂ ಮರೆಯಲಾರೆ: ವಿಜಯೇಂದ್ರ

ತಮ್ಮ ಪಕ್ಷದಲ್ಲೇ ಬೇರೆಯವರಿಗೆ ಅವಕಾಶ ಕೊಡದ ಗಾಂಧಿ ಕುಟುಂಬದವರು ಸೇನೆ ಬಗ್ಗೆ ಮಾತನಾಡ್ತಾರೆ: ಬಿಜೆಪಿ ವ್ಯಂಗ್ಯ

ಕರ್ನಾಟಕ ಎಸ್ಎಸ್ಎಲ್ ಸಿ, ದ್ವಿತೀಯ ಪಿಯುಸಿ ಪರೀಕ್ಷೆ ವೇಳಾಪಟ್ಟಿ ಇಲ್ಲಿದೆ ನೋಡಿ

ದೇವರು ಕೊಟ್ರೂ ಪೂಜಾರಿ ಕೊಡಲಿಲ್ಲ: ಕೇಂದ್ರ ಜಿಎಸ್ ಟಿ ಇಳಿಸಿದ್ದರೆ ನಂದಿನಿ ತುಪ್ಪದ ಬೆಲೆ ಏರಿಸಿದ ಕೆಎಂಎಫ್

ಬ್ರೆಜಿಲ್ ಮಾಡೆಲ್ ಹರ್ಯಾಣದಲ್ಲಿ 22 ಬಾರಿ ವೋಟ್: ರಾಹುಲ್ ಗಾಂಧಿಯಿಂದ ಮತ್ತೊಂದು ಬಾಂಬ್

ಮುಂದಿನ ಸುದ್ದಿ
Show comments