Publish Date: Sun, 13 Nov 2016 (11:19 IST)
Updated Date: Sun, 13 Nov 2016 (12:30 IST)
ನವವಿವಾಹಿತ ಯುವತಿಯೋರ್ವಳು ತಾನು ಪ್ರೀತಿಸಿದವನ ಜತೆ ಓಡಿ ಹೋದಕ್ಕೆ ಕೋಪಗೊಂಡ ಗ್ರಾಮಸ್ಥರು ಆಕೆಯನ್ನು ಹಿಡಿದು ತಂದು ಬೆತ್ತಲೆ ಮೆರವಣಿಗ ಮಾಡಿಸಿದ ಹೇಯ, ಖಂಡನೀಯ ಘಟನೆ ಮಧ್ಯಪ್ರದೇಶದ ರತ್ಲಂ ಜಿಲ್ಲೆಯಲ್ಲಿ ನಡೆದಿದೆ.
24 ವರ್ಷದ ಬುಡಕಟ್ಟು ಜನಾಂಗದ ಯುವತಿಗೆ ಕಳೆದ ಕೆಲ ದಿನಗಳ ಹಿಂದೆ ಮದುವೆಯಾಗಿತ್ತು. ಮದುವೆಯಾದ ಸ್ವಲ್ಪ ದಿನದಲ್ಲೇ ಆಕೆಗೆ ಬೇರೊಬ್ಬನ ಮೇಲೆ ಪ್ರೀತಿಯಾಗಿದೆ. ಇಬ್ಬರು ಪರಷ್ಪರ ಪ್ರೇಮದ ಬಲೆಯಲ್ಲಿ ಸಿಲುಕಿ ಗ್ರಾಮದಿಂದ ಪರಾರಿಯಾಗಿದ್ದಾರೆ.
ಮಹಿಳೆ ಪೋಷಕರು ಮತ್ತು ಪತಿಯ ಮನೆಯವರು ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದು, ಕಾರ್ಯಾಚರಣೆ ಕೈಗೊಂಡ ಪೊಲೀಸರಿಗೆ ಆಕೆ ಹತ್ತಿರದ ಗ್ರಾಮವೊಂದರಲ್ಲಿ ಪ್ರೇಮಿಯೊಂದಿಗೆ ಪತ್ತೆಯಾಗಿದ್ದಾಳೆ. ತಕ್ಷಣ ಆಕೆಯನ್ನು ಎಳೆದುತಂದ ಗ್ರಾಮಸ್ಥರು ಪ್ರೇಮಿ ಮತ್ತು ಆಕೆಯನ್ನು ಬೆತ್ತಲೆಗೊಳಿಸಿ ಗ್ರಾಮದಲ್ಲಿ ಮೆರವಣಿಗೆ ಮಾಡಿಸಿದ್ದಾರೆ. ಇದರಲ್ಲಿ ಆಕೆಯ ಗಂಡ ಕೂಡ ಭಾಗಿಯಾಗಿದ್ದಾನೆ.
ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ