Select Your Language

Notifications

webdunia
webdunia
webdunia
webdunia

ಕೃಷ್ಣಮಠದಲ್ಲಿ ನಮಾಜ್ ಮಾಡಿದ್ದರಿಂದ ಹಿಂದೂ ಧರ್ಮಕ್ಕೆ ಅಪಚಾರವಾಗಿಲ್ಲ: ಪೇಜಾವರ ಶ್ರೀ

ಕೃಷ್ಣಮಠದಲ್ಲಿ ನಮಾಜ್ ಮಾಡಿದ್ದರಿಂದ ಹಿಂದೂ ಧರ್ಮಕ್ಕೆ ಅಪಚಾರವಾಗಿಲ್ಲ: ಪೇಜಾವರ ಶ್ರೀ
ಉಡುಪಿ , ಮಂಗಳವಾರ, 27 ಜೂನ್ 2017 (12:23 IST)
ಉಡುಪಿ ಕೃಷ್ಣಮಠದಲ್ಲಿ ಇಫ್ತಾರ್ ಕೂಟದ ಬಳಿಕ ಮುಸ್ಲಿಂ ಬಾಂಧವರಿಗೆ ನಮಾಜ್ ಮಾಡಲು ಅವಕಾಶ ಕೊಟ್ಟಿದ್ದರಿಂದ ಹಿಂದೂ ಧರ್ಮಕ್ಕೆ ಅಪಚಾರವಾಗಿಲ್ಲ ಎಂದು ಪೇಜಾವರ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದ್ಧಾರೆ.

ಉಪವಾಸ ಅಂತ್ಯಗೊಳಿಸಿದ ಬಳಿಕ ನಮಾಜ್ ಮಾಡುವುದು ವಾಡಿಕೆ. ಅದಕ್ಕಾಗಿಯೇ ಅವಕಾಶ ಮಾಡಿಕೊಟ್ಟೆವು. ಇಫ್ತಾರ್`ಗೆ ಆಹ್ವಾನ ನಿಡಿ ಹಾಗೆ ಕಳುಹಿಸುವುದು ಸರಿಯಲ್ಲ. ಸಾರ್ವಜನಿಕವಾಗಿ ನಮಾಜ್ ಮಾಡುವುದರಿಂದ ಯಾವುದೇ ತಪ್ಪಿಲ್ಲ. ಮಧ್ವಾಚಾರ್ಯರ ಕಾಲದಿಂದಲೂ ಕೃಷ್ಣಮಠಕ್ಕೆ ಮುಸ್ಲಿಂ ಬಾಂಧವರ ಜೊತೆ ಉತ್ತಮ ಸಂಬಂಧವಿದೆ ಎಂದು ಅವರು ಸಮರ್ಥನೆ ನೀಡಿದ್ದಾರೆ.

ಇತ್ತ, ಕೃಷ್ಣಮಠದಲ್ಲಿ ನಮಾಜ್`ಗೆ ಅವಕಾಶ ನೀಡಿದ್ದ ಖಂಡಿಸಿ ಶ್ರೀರಾಮಸೇನೆ ಜುಲೈ 2ರಂದು ಜಿಲ್ಲಾಧ್ಯಂತ ಪ್ರತಿಭಟನೆಗೆ ನಿರ್ಧರಿಸಿದೆ. ಇದನ್ನ ವಿರೋಧಿಸಿ ಉಡುಪಿ ಜಿಲ್ಲಾ ಕಾಂಗ್ರೆಸ್, ಶ್ರೀರಾಮಸೇನೆ ವಿರುದ್ಧ ಪ್ರತಿಭಟನೆ ನಡೆಸುವುದಾಗಿ ಹೇಳಿದೆ. ಪೇಜಾವರ ಶ್ರೀಗಳ ಕಾರ್ಯವನ್ನ ಅವರು ಬೆಂಬಲಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಗೋ ಹತ್ಯೆ ನಿಷೇಧ ಪ್ರಶ್ನಿಸುವವರ ವಿರುದ್ಧ ಕೆಂಡ ಕಾರಿದ ನಟ ಜಗ್ಗೇಶ್