Select Your Language

Notifications

webdunia
webdunia
webdunia
webdunia

ಹೆಚ್ಚುವರಿ ವರದಕ್ಷಿಣೆ ಕೋರಿದ ವರನನ್ನು ತಿರಸ್ಕರಿಸಿದ ವಧು

ಹೆಚ್ಚುವರಿ ವರದಕ್ಷಿಣೆ ಕೋರಿದ ವರನನ್ನು ತಿರಸ್ಕರಿಸಿದ ವಧು
ಪಾಟ್ನಾ , ಮಂಗಳವಾರ, 18 ಏಪ್ರಿಲ್ 2017 (19:07 IST)
ಪೋಷಕರಿಗೆ ವರನ ಕಡೆಯವರು ಹೆಚ್ಚುವರಿ ವರದಕ್ಷಿಣೆ ಕೋರಿದ್ದಾರೆ ಎನ್ನುವ ಮಾಹಿತಿ ಪಡೆದ ವಧು, ವಿವಾಹವನ್ನು ರದ್ದುಗೊಳಿಸಿ ಅಚ್ಚರಿ ಮೂಡಿಸಿದ್ದಾಳೆ.
 
ನಿಶ್ಚಿತಾರ್ಥ ಸಂದರ್ಭದಲ್ಲಿ ನಿಗದಿಯಾಗಿದ್ದ ವರದಕ್ಷಿಣೆ ನೀಡಿದರೂ ವರನ ಕಡೆಯವರು ಹೆಚ್ಚಿನ ವರದಕ್ಷಿಣೆಗೆ ಬೇಡಿಕೆ ಸಲ್ಲಿಸಿದ್ದರಿಂದ ಪುತ್ರಿ ವಿವಾಹವನ್ನೇ ರದ್ದುಗೊಳಿಸಿರುವುದು ನನಗೆ ಆಕೆಯ ಬಗ್ಗೆ ಗೌರವ ಹೆಚ್ಚಿದೆ ಎಂದು ವಧುವಿನ ತಂದೆ ತಿಳಿಸಿದ್ದಾರೆ.
 
ವರ, ವಧುವಿಗೆ ತಾಳಿ ಕಟ್ಟುವ ಕೆಲವೇ ಕ್ಷಣಗಳ ಮುಂಚೆ ವರನ ಕಡೆಯವರು ವಧುವಿನ ತಂದೆ ಮುಂದೆ ಹೆಚ್ಚುವರಿ ವರದಕ್ಷಿಣೆ ನೀಡುವಂತೆ ಒತ್ತಡ ಹೇರಿದ್ದರು. ಇದರಿಂದ ಅಸಮಾಧಾನಗೊಂಡ ವಧು ವಿವಾಹ ರದ್ದುಗೊಳಿಸಿದ್ದಾಳೆ. 
 
ವರದಕ್ಷಿಣೆ ಕೊಡುವವರು ಮತ್ತು ವರದಕ್ಷಿಣೆ ತೆಗೆದುಕೊಳ್ಳುವವರನ್ನು ಸಮಾಜ ಬಹಿಷ್ಕಾರ ಹಾಕಬೇಕು ಎಂದು ಬಿಹಾರ್ ಮುಖ್ಯಮಂತ್ರಿ ನಿತೀಶ್ ಕುಮಾರ್ ಕರೆ ನೀಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಐಟಿ ಇಲಾಖೆಯಿಂದ ಸ್ವಿಸ್ ಬ್ಯಾಂಕ್‌ ಖಾತೆ ಮುಚ್ಚಿಟ್ಟ ವರ್ತಕನಿಗೆ 2 ವರ್ಷ ಜೈಲು