ಯೋಗಗುರು ಬಾಬಾ ರಾಮದೇವ್ ಆಪ್ತ, ಪತಂಜಲಿ ಸಂಸ್ಥೆಯ ಸಹ ಸಂಸ್ಥಾಪಕ ಬಾಲಕೃಷ್ಣ ಭಾರತದ ಟಾಪ್ ಶ್ರೀಮಂತರ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ.
ಫೋರ್ಬ್ಸ್ ಮ್ಯಾಗಜಿನ್ ಪ್ರಕಟಿಸಿರುವ ಭಾರತದ 100 ಸಿರಿವಂತ ಉದ್ಯಮಿಗಳ ಪಟ್ಟಿಯಲ್ಲಿ ಬಾಲಕೃಷ್ಣ 48ನೇ ಸ್ಥಾನ ಪಡೆದಿದ್ದಾರೆ.
ಕಳೆದ ವರ್ಷ 5000 ಕೋಟಿ ಆದಾಯಗಳಿಸಿದ್ದ ಪತಂಜಲಿ ಈ ಬಾರಿ ದುಪ್ಪಟ್ಟು ಆದಾಯಗಳಿಸುವ ನಿರೀಕ್ಷೆಯಲ್ಲಿದೆ. ಸದ್ಯ ಬಾಲಕೃಷ್ಣ 16 ಸಾವಿರ ಕೋಟಿ ಆಸ್ತಿ ಹೊಂದಿದ್ದಾರೆ.
ಪತಂಜಲಿ ಸಂಸ್ಥೆಯಲ್ಲಿ ಬಾಬಾ ಷೇರು ಹೊಂದಿಲ್ಲ. ಆದರೆ ಕಂಪನಿಯ ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ.
ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್‌ಐಎಲ್) ಅಧ್ಯಕ್ಷ ಮುಕೇಶ್ ಅಂಬಾನಿ ಭಾರತದ ಅತ್ಯಂತ ಶ್ರೀಮಂತರ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಉಳಿಸಿಕೊಳ್ಳುವಲ್ಲಿ ಸಫಲರಾಗಿದ್ದಾರೆ.
ಇಲ್ಲಿದೆ ಭಾರತದ ಅಗ್ರ 10 ಸಿರಿವಂತ ಉದ್ಯಮಿಗಳ ಪಟ್ಟಿ
1. ಮುಖೇಶ್ ಅಂಬಾನಿ $ 22.7 ಬಿಲಿಯನ್ (ರಿಲಯನ್ಸ್ ಅಧ್ಯಕ್ಷರು)
2. ದಿಲೀಪ್ ಸಾಂಘ್ವಿ $ 16.9 ಬಿಲಿಯನ್ (ಸನ್ ಫಾರ್ಮಾಸ್ಯುಟಿಕಲ್ಸ್ ಮಾಲೀಕರು)
3. ಹಿಂದೂಜಾ ಕುಟುಂಬ $ 15.2 ಬಿಲಿಯನ್ (ಹಿಂದುಜಾ ಗ್ರೂಪ್)
4. ಅಜೀಂ ಪ್ರೇಮ್‌ಜಿ $ 15 ಬಿಲಿಯನ್ (ವಿಪ್ರೊ ಅಧ್ಯಕ್ಷ)
5. ಪಲ್ಲೊಂಜಿ ಮಿಸ್ತ್ರಿ 6.9 ಮಿಸ್ತ್ರಿ $ 13.9 ಬಿಲಿಯನ್ (ಶಪೂರ್ಜಿ ಪಲ್ಲೊಂಜಿ ಸಮೂಹ ಅಧ್ಯಕ್ಷ)
6. ಲಕ್ಷ್ಮಿ ಮಿತ್ತಲ್ $ 12.5 ಬಿಲಿಯನ್ (ಆರ್ಸೆಲರ್ ಮಿತ್ತಲ್ ಅಧ್ಯಕ್ಷರು)
7. ಗೋದ್ರೆಜ್ ಕುಟುಂಬ $ 12.4 ಬಿಲಿಯನ್ (ಗೋದ್ರೇಜ್ ಸಮೂಹ)
8. ಶಿವ ನಾಡರ್ $ 11.4 ಬಿಲಿಯನ್ (ಹೆಚ್‌ಸಿಎಲ್ ಅಧ್ಯಕ್ಷರು)
9. ಕುಮಾರ ಮಂಗಳಂ ಬಿರ್ಲಾ $ 8.8 ಬಿಲಿಯನ್ (ಆದಿತ್ಯ ಬಿರ್ಲಾ ಗ್ರೂಪ್ ಅಧ್ಯಕ್ಷ)
10. ಸೈರಸ್ ಪೂನಾವಾಲಾ $ 8.6 ಬಿಲಿಯನ್ (ಪೂನಾವಾಲಾ ಗ್ರೂಪ್ ಅಧ್ಯಕ್ಷ)
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ