Select Your Language

Notifications

webdunia
webdunia
webdunia
webdunia

ದೇಶದ ಶ್ರೀಮಂತ ಉದ್ಯಮಿಗಳಲ್ಲಿ ಪತಂಜಲಿಯ ಆಚಾರ್ಯಗೆ 26ನೇ ಸ್ಥಾನ

ದೇಶದ ಶ್ರೀಮಂತ ಉದ್ಯಮಿಗಳಲ್ಲಿ ಪತಂಜಲಿಯ ಆಚಾರ್ಯಗೆ 26ನೇ ಸ್ಥಾನ
ಹರಿದ್ವಾರ್ , ಗುರುವಾರ, 15 ಸೆಪ್ಟಂಬರ್ 2016 (13:59 IST)
ಪತಂಜಲಿ ಗ್ರೂಪ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಯೋಗಾ ಗುರು ಬಾಬಾ ರಾಮದೇವ್ ಸಹಚರ ಆಚಾರ್ಯ ಬಾಲಕೃಷ್ಣ ದೇಶದ ಶ್ರೀಮಂತರಲ್ಲಿ 26ನೇ ಸ್ಥಾನ ಪಡೆದಿದ್ದಾರೆ.
 
ಆಚಾರ್ಯ ಬಾಲಕೃಷ್ಣ ವಿಶೇಷವೆಂದರೆ ಅವರು ಯಾವತ್ತೂ ಕಂಪ್ಯೂಟರ್ ಬಳಸುವುದಿಲ್ಲ ಆದರೆ, ಪ್ರಿಂಟೌಟ್‌ಗಳನ್ನು ಮಾತ್ರ ಬಳಸುತ್ತಾರೆ ಎನ್ನಲಾಗಿದೆ. 
 
ಕುರ್ತಾ ಮತ್ತು ಧೋತಿ ಧರಿಸುವ ಆಚಾರ್ಯ ಬಹುತೇಕ ಹಿಂದಿ ಭಾಷೆಯಲ್ಲಿ ಮಾತನಾಡುತ್ತಾರೆ. ಪತಂಜಲಿ ಕುಟುಂಬ ಆಗಸ್ಟ್ 4 ರಂದು ಆಚಾರ್ಯ ಅವರ ಜನ್ಮದಿನಾಚರಣೆಯನ್ನು ಜಡಿ ಬೂಟಿ ದಿವಸ್ ಎಂದು ಆಚರಿಸಲಾಗುತ್ತದೆ.  
 
ಕಳೆದ 2011 ರಲ್ಲಿ ವಂಚನೆ ಮತ್ತು ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದಾರೆ ಎನ್ನುವ ಆರೋಪದ ಮೇಲೆ ಸಿಬಿಐ ಆಚಾರ್ಯರನ್ನು ಬಂಧಿಸಿತ್ತು. ಕಾನೂನುಬಾಹಿರವಾಗಿ ಪಿಸ್ತೂಲ್ ಹೊಂದಿದ್ದಾರೆ ಎಂದು ಆರೋಪಿಸಲಾಗಿತ್ತು. ಆದರೆ, ಅವರ ಮೇಲಿನ ಆರೋಪಗಳು ನಿರಾಧಾರ ಎಂದು ಕೋರ್ಟ್ ತೀರ್ಪು ನೀಡಿತ್ತು.
 
ಪತಂಜಲಿ ಗ್ರೂಪ್ 2015-2016 ರ ಸಾಲಿನಲ್ಲಿ ವಾರ್ಷಿಕ 5 ಸಾವಿರ ಕೋಟಿ ರೂಪಾಯಿ ವಹಿವಾಟು ನಡೆಸಿದೆ. ಕಂಪೆನಿಯಲ್ಲಿ ಶೇ.94 ರಷ್ಟು ಶೇರುಗಳ ಪಾಲನ್ನು ಹೊಂದಿರುವ ಆಚಾರ್ಯ, ದೇಶದ 339 ಶ್ರೀಮಂತರಲ್ಲಿ 26 ನೇ ಸ್ಥಾನ ಪಡೆದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ಬಿಬಿಎಂಪಿ ಚುನಾವಣೆ: ಕಾಂಗ್ರೆಸ್ ಪಕ್ಷದಿಂದ ವಾಮಮಾರ್ಗ ಯತ್ನ ಎಂದ ಬಿಜೆಪಿ