Select Your Language

Notifications

webdunia
webdunia
webdunia
webdunia

ಪಾಂಪೋರ್ ಎನ್‌ಕೌಂಟರ್ ಅಂತ್ಯ: ಇಬ್ಬರು ಲಷ್ಕರ್ ಉಗ್ರರು ಮಟಾಷ್

ಪಾಂಪೋರ್ ಎನ್‌ಕೌಂಟರ್ ಅಂತ್ಯ: ಇಬ್ಬರು ಲಷ್ಕರ್ ಉಗ್ರರು ಮಟಾಷ್
ಶ್ರೀನಗರ್ , ಬುಧವಾರ, 12 ಅಕ್ಟೋಬರ್ 2016 (18:01 IST)
ಕಳೆದ 56 ಗಂಟೆಗಳಿಂದ ನಿರಂತರವಾಗಿ ಸೇನೆ ಮತ್ತು ಉಗ್ರರ ನಡುವೆ ಸಾಗಿದ ಎನ್‌ಕೌಂಟರ್ ಕೊನೆಗೂ ಅಂತ್ಯವಾಗಿದೆ. ಇಬ್ಬರು ಲಷ್ಕರ್-ಎ-ತೊಯಿಬಾ ಸಂಘಟನೆಗೆ ಸೇರಿದ ಇಬ್ಬರು ಉಗ್ರರನ್ನು ಹೊಡೆದುರುಳಿಸಲಾಗಿದೆ. 
 
ಸೇನಾ ಎನ್‌ಕೌಂಟರ್ ಹೊಣೆ ಹೊತ್ತುಕೊಂಡಿದ್ದ ಸೇನಾಧಿಕಾರಿ ಮೇಜರ್ ಜನರಲ್ ಅಶೋಕ್ ನರುಲಾ ಮಾತನಾಡಿ, ಉಗ್ರರೊಂದಿಗಿನ ಎನ್‌ಕೌಂಟರ್ ಅಂತ್ಯವಾಗಿದ್ದು, ಇಬ್ಬರು ಉಗ್ರರನ್ನು ಹತ್ಯೆ ಮಾಡಲಾಗಿದೆ. ಉಗ್ರರಿಂದ ಎರಡು ಶಸ್ತ್ರಾಸ್ತ್ರಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
 
ಎರಡು ದಿನಗಳ ವರೆಗೆ ಎನ್‌ಕೌಂಟರ್ ಮುಂದುವರಿದಿರುವುದು ಯಾಕೆ ಎನ್ನುವ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಉಗ್ರರು ಬೃಹತ್ ಕಟ್ಟಡದೊಳಗೆ ಅವಿತುಕೊಂಡಿದ್ದರಿಂದ, ಕಾರ್ಯಾಚರಣೆ ತುಂಬಾ ಕಷ್ಟವಾಗಿತ್ತು ಎಂದು ಮಾಹಿತಿ ನೀಡಿದ್ದಾರೆ,
 
ಒಂದು ವರ್ಷದೊಳಗೆ ಉಗ್ರರು ಎರಡು ಬಾರಿ ಇಡಿಐ ಕಟ್ಟಡವನ್ನು ಪ್ರವೇಶಿಸಿ ಸೇನಾ ನೆಲೆಗಳ ಮೇಲೆ ಗುಂಡಿನ ದಾಳಿ ನಡೆಸಿದ್ದರು. 
 
ಸೇನಾ ಕಾರ್ಯಾಚರಣೆ ಅಂತ್ಯಗೊಳಿಸುವ ಮುನ್ನ ಕಟ್ಟಡದ 50 ಕೋಣೆಗಳನ್ನು ಸೇನಾಪಡೆಗಳು ಪರಿಶೀಲಿಸಿ ಉಗ್ರರು ಹತರಾಗಿದ್ದಾರೆ ಎನ್ನುವುದು ಖಚಿತಪಡಿಸಿಕೊಳ್ಳಲಾಯಿತು ಎಂದು ಹೇಳಿದ್ದಾರೆ.
 
ನಿನ್ನೆ ಸಂಜೆ ಒಬ್ಬ ಲಷ್ಕರ್ ಉಗ್ರ ಹತನಾಗಿದ್ದರೆ, ಇಂದು ಮತ್ತೊಬ್ಬ ಭಯೋತ್ಪಾದಕನನ್ನು ಸೇನಾಪಡೆಗಳು ಹತ್ಯೆಗೈದಿವೆ ಎಂದು ಸೇನಾಧಿಕಾರಿ ಅಶೋಕ್ ನರುಲಾ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ಜಯಾ (ಅಮ್ಮ)ನ ದರ್ಶನ ಪಡೆದ ಅಮಿತ್ ಶಾ, ಅರುಣ್ ಜೇಟ್ಲಿ