Select Your Language

Notifications

webdunia
webdunia
webdunia
webdunia

ಪ್ರೀತಿಸಿ ಕೈಕೊಟ್ಟವನ ಮೇಲೆ ಬಾಂಬ್ ಹಾಕಿ ಉಡಾಯಿಸಲು ಯತ್ನ

Palwal
ಪಲ್ವಾಲ್ , ಗುರುವಾರ, 13 ಅಕ್ಟೋಬರ್ 2016 (11:44 IST)
ಪ್ರೀತಿಸಿ ಕೈಕೊಟ್ಟವರನ್ನು ವಿವಿಧ ರೀತಿಯಲ್ಲಿ ಕೊಲ್ಲಲೆತ್ನಿಸುವುದರ ಬಗ್ಗೆ ಕೇಳಿದ್ದೇವೆ. ಆದರೆ ಇಲ್ಲೊಬ್ಬ ಯುವತಿ ವಂಚಿಸಿದವನ ಮೇಲೆ ಬಾಂಬ್ ಹಾಕಿ ಉಡಾಯಿಸಲೆತ್ನಿದ್ದಾಳೆ ಎಂದರೆ ನೀವು ನಂಬಲೇ ಬೇಕು. 
ಹರಿಯಾಣಾದ ಪಲ್ವಾಲ್ ಜಿಲ್ಲೆಯ ನಿವಾಸಿ ಆರತಿ ತನ್ನ ಮಾಜಿ ಪ್ರಿಯಕರ ಪ್ರದೀಪ್ ಅಲಿಯಾಸ್ ದರೋಗಾ ಮತ್ತು ಇಬ್ಬರ ಜತೆ ಸೇರಿ  ಮನೆಯಲ್ಲಿಯೇ ನಾಡ ಬಾಂಬ್ ತಯಾರಿಸಿದ್ದಾಳೆ. ಸಿಡಿಮದ್ದಿನ ಪುಡಿ, ಗಾಜು, ಸಣ್ಣ ಕಲ್ಲು, ಉಗುರು ಹಾಗೂ ಮೊಳೆಯ ಸಹಾಯದಿಂದ 3 ಬಾಂಬ್ ತಯಾರಿಸಿ ತನಗೆ ವಂಚಿಸಿದ ಪ್ರಿಯತಮನ ಮನೆಯಲ್ಲಿಟ್ಟಿದ್ದಾಳೆ. 
 
ಬೇರೊಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಆರತಿ ಮತ್ತು ಪ್ರದೀಪ್‌ನನ್ನು ವಿಚಾರಣೆಗೊಳಪಡಿಸಿದಾಗ ಈ ಯೋಜನೆ ಬೆಳಕಿಗೆ ಬಂದಿದೆ. 
 
2010ರಲ್ಲಿ ಆರತಿಗೆ ಪರಿಚಯವಾಗಿದ್ದ ರಾಕೇಶ್ ತನ್ನ ಮೊದಲ ಪತ್ನಿ ಮತ್ತು ಮೂವರು ಮಕ್ಕಳನ್ನು ತ್ಯಜಿಸಿ ಆರತಿಯೊಂದಿಗೆ ವಾಸಿಸಿದ್ದ. ಇತ್ತೀಚಿಗೆ ಆರತಿಯನ್ನು ತ್ಯಜಿಸಿದ್ದ ಆತ ಪ್ರಥಮ ಪತ್ನಿ ಬಳಿ ವಾಪಸ್ಸಾಗಿದ್ದ. ಇದೇ ಸಿಟ್ಟಿನಲ್ಲಿ ಆರತಿ ಆತನನ್ನು ಕೊಲ್ಲಲು ಯತ್ನಿಸಿದ್ದಾಳೆ. 
 
ಆ ಮೂರು ಬಾಂಬ್‌ಗಳನ್ನು ವಶಪಡಿಸಿಕೊಂಡು ನಿಷ್ಕ್ರಿಯಗೊಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
 

Share this Story:

Follow Webdunia kannada

ಮುಂದಿನ ಸುದ್ದಿ

ಅಮಾನತಾಗಿರುವ ಶಾಸಕರನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ: ಎಚ್‌.ಡಿ.ಕುಮಾರಸ್ವಾಮಿ